
ದೇಶಪ್ರಮುಖ ಸುದ್ದಿ
ಡೆಡ್ಲಿ ಬ್ಲೂವೇಲ್ ಸೆಳೆತಕ್ಕೆ 16 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ
ತಿರುವನಂತಪುರ, ಆ.16 : ಕಿಲ್ಲರ್ ಗೇಮ್ “ಬ್ಲೂವೇಲ್” ಕೇರಳದ ರಾಜಧಾನಿ ತಿರುವನಂತಪುರಂನ 16 ವರ್ಷದ ವಿದ್ಯಾರ್ಥಿಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದೆ ಸಾವನ್ನಪ್ಪುವಂತೆ ಮಾಡಿದೆ ಎಂದು ವರದಿಯಾಗಿದೆ.
ಭಾರತದಲ್ಲಿ ಈಗಾಗಲೇ ಹಲವಾರು ಮಕ್ಕಳ ಬಲಿ ಪಡೆದಿರುವ ಈ ಆನ್ಲೈನ್ ಗೇಮ್ಗೆ ಇದೀಗ ಕೇರಳದ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ಪಿಯುಸಿ ಮೊದಲ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿ 26 ವರ್ಷದ ಮನೋಜ್ ಅನುಮಾನಾಸ್ಪದ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಕೋಣೆಯ ಫ್ಯಾನ್ಗೆ ನೇಣುಬಿಗಿದ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಜುಲೈ 26ರಂದು ಮನೋಜ್ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಈಗ ಇದು ಡೆಡ್ಲಿ ಗೇಮ್ ನಿಂದ ಮಾಡಿಕೊಂಡ ಆತ್ಮಹತ್ಯೆ ಎಂದು ಇದೀಗ ಎಲ್ಲೆಡೆ ಸುದ್ದಿಯಾಗಿದೆ.
ಕಳೆದ 9 ತಿಂಗಳುಗಳಿಂದ ಆತನ ನಡವಳಿಕೆಯಲ್ಲಿ ವ್ಯತ್ಯಾಸವಿತ್ತು. ಬ್ಲೂವೇಲ್ ಗೇಮ್ ಬಗ್ಗೆ ನನ್ನ ಮಗ ನನ್ನ ಬಳಿ ಹೇಳಿದ್ದ. ನಂತರದ ದಿನಗಳಲ್ಲಿ ವಿಚಿತ್ರವಾಗಿ ನಡೆದುಕೊಳ್ಳಲು ಶುರುಮಾಡಿದ್ದ. ಇದೇ ಆಟದಿಂದಲೇ ನನ್ನ ಮಗ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಆತನ ತಾಯಿಯೂ ಆರೋಪಿಸಿದ್ದಾರೆ.
ಇದಲ್ಲದೆ ಈ ವಿದ್ಯಾರ್ಥಿಯು ಸ್ಮಶಾನಕ್ಕೆ ಹೋಗುತ್ತಿದ್ದುದು, ಕೈ ಮೇಲೆ ಎ, ಬಿ, ಐ ಎಂದು ಬರೆದುಕೊಂಡಿದ್ದು, ಅನೇಕ ಕಡೆ ಗಾಯಗಳಾಗಿದ್ದುದು ಕಂಡುಬಂದಿದೆ. ಇದರಿಂದ ಇನ್ನಷ್ಟು ವಿಷಯ ಹೊರಬರುವ ಸಾಧ್ಯತೆಯಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
-ಎನ್.ಬಿ.