ಮೈಸೂರು

ಅಪರಿಚಿತ ವಾಹನ ಡಿಕ್ಕಿ : ನರಿ ಸಾವು

ಮೈಸೂರು,ಆ.16:- ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ಬಯಲು ರಂಗಮಂದಿರದ ಎದುರಿನ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ನರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದೆ.

ಬುಧವಾರ ಬೆಳಿಗ್ಗೆ ವಾಯುವಿಹಾರಿಗಳ ಕಣ್ಣಿಗೆ ಕಾಣ ಸಿಕ್ಕಿದ್ದು, ವಾಹನ ಸವಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಬೇಕು ಇಲ್ಲವೇ ಹಂಪ್ಸ್ ಹಾಕಬೇಕು. ಯಾಕೆಂದರೆ ರಾತ್ರಿಯ ವೇಳೆ ವಾಹನ ಸವಾರರು ಅತಿವೇಗದಲ್ಲಿ ಬರುವುದರಿಂದ ಅಪಘಾತ ಸಂಭವಿಸಲಿದೆ. ಕುಕ್ಕರಹಳ್ಳಿ ಕೆರೆಗಳ ಸುತ್ತಮುತ್ತ ಹಲವು ಕಾಡು ಪ್ರಾಣಿಗಳು ವಾಸವಿರುವುದರಿಂದ ಅವುಗಳು ರಾತ್ರಿಯ ವೇಳೆ ರಸ್ತೆಗೆ ಬಂದು ಈ ರೀತಿ ಅಪಘಾತಗಳು ಹೆಚ್ಚುವ ಸಾಧ್ಯತೆಗಳಿವೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: