ದೇಶಪ್ರಮುಖ ಸುದ್ದಿ

ಪ್ಯಾಂಟ್ ಜೇಬಿನಲ್ಲೇ ಸ್ಫೋಟವಾದ ಸ್ಮಾರ್ಟ್‍ಫೋನ್ !

ವಿಶಾಖಪಟ್ಟಣಂ, ಆ. 16 : ಜೇಬಿನಲ್ಲಿಟ್ಟಿದ್ದ ಸ್ಮಾರ್ಟ್‍ಫೋನ್‍ ಸ್ಫೋಟವಾಗಿದ್ದು, ಬಳಕೆದಾರ ಚರ್ಮಸುಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಪೂರ್ವ ಗೋದಾವರಿ ಜಿಲ್ಲೆಯ ರಾವುಲಾಪಾಲೆಮ್ ಬಳಿ ಘಟನೆ ನಡೆದಿದ್ದು, Xiaomi Redmi Note 4 ಸ್ಮಾರ್ಟ್ ಫೋನ್ ಸ್ಫೋಟಗೊಂಡಿದೆ. ಇದರಿಂದಾಗಿ ಬಳಕೆದಾರ ಭಾವನ ಸೂರ್ಯಕಿರಣ್ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೈಕ್‍ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಫೋನ್ ಸ್ಫೋಟಗೊಂಡಿದೆ ಎಂದು ತಿಳಿದುಬಂದಿದ್ದು, ಕಂಪನಿಯಿಂದ ಪರಿಹಾರ ಕೋರಿ ನ್ಯಾಯಾಲಯದ ಮೊರೆ ಹೋಗುವುದಾಗಿ ಅವರು ಹೇಳಿದ್ದಾರೆ. ಸೂರ್ಯ ಕಿರಣ್ ಅವರು 20 ದಿನಗಳ ಹಿಂದೆ ಫ್ಲಿಪ್ ಕಾರ್ಟ್ ನಲ್ಲಿ Xiaomi Redmi Note 4 ಸ್ಮಾರ್ಟ್ ಫೋನ್ ಖರೀದಿಸಿದ್ದರು.

ನಾವು ಗ್ರಾಹಕರ ಸುರಕ್ಷತೆಗೆ ಒತ್ತು ನೀಡುತ್ತೇವೆ. ಯಾವ ಕಾರಣಕ್ಕೆ ಸ್ಮಾರ್ಟ್ ಫೋನ್ ಸ್ಫೋಟಗೊಂಡಿದೆ ಎಂಬುದರ ತನಿಖೆ ನಡೆಸುತ್ತೇವೆ ಎಂದು ಕಂಪನಿ ಪ್ರತಿನಿಧಿಗಳು ತಿಳಿಸಿದ್ದಾರೆ.

ಬೇರೆ ಚಾರ್ಚರ್ ಬಳಸಿದ್ದೇ ಕಾರಣ!

ಬೆಂಗಳೂರಿನಲ್ಲೂ ಇತ್ತೀಚೆಗೆ ಅರ್ಜುನ್ ಎಂಬುವವರ Xiaomi Redmi Note 4 ಸ್ಮಾರ್ಟ್ ಫೋನ್ ಸ್ಫೋಟಗೊಂಡಿದ್ದು, ಕಂಪನಿ ತನಿಖೆಯ ಬಳಿಕ ದೋಷಪೂರಿತ ಬೇರೆ ಕಂಪನಿಯ ಚಾರ್ಜರ್ ಬಳಸಿದ್ದರಿಂದ ಸ್ಫೋಟಗೊಂಡಿದೆ ಎಂದು ಸ್ಪಷ್ಟಪಡಿಸಿತ್ತು. ಅಧಿಕೃತ Xiaomi Redmi Note 4 ಸ್ಮಾರ್ಟ್ ಫೋನ್ ಚಾರ್ಜರ್ ಗಳನ್ನೇ ಬಳಸುವಂತೆ ಗ್ರಾಹಕರಿಗೆ ಕಂಪನಿ ಸಲಹೆ ನೀಡಿತ್ತು. ಈಗ ಸೂರ್ಯಕಿರಣ್ ಪ್ರಕರಣದ ಕಾರಣ ತಿಳಿಯಲು ತನಿಖೆ ಕೈಗೊಳ್ಳಲಾಗಿದೆ.

-ಎನ್.ಬಿ.

Leave a Reply

comments

Related Articles

error: