ಮೈಸೂರು

ಟಿಬೇಟಿಯನ್ನರಿಂದ 56 ನೇ ಪ್ರಜಾರಾಜ್ಯ ದಿನಾಚರಣೆ

ಬೈಲಕುಪ್ಪೆಯ ಲಗ್ಸಮ್ ಟಿಬೇಟಿಯನ್ ಕೋ-ಅಪರೇಟಿವ್ ಹಾಲ್‍ನಲ್ಲಿ ನಿರಾಶ್ರಿತ ಟಿಬೇಟಿಯನ್ನರು 56ನೇ ಪ್ರಜಾರಾಜ್ಯ ದಿನವನ್ನಾಚರಿಸಿದರು.

ಇಂಡೋ-ಟಿಬೇಟಿಯನ್ ಫ್ರೆಂಡ್ ಶಿಪ್ ಸೊಸೈಟಿಯ ಉಪಾಧ್ಯಕ್ಷ ಜವರೇಗೌಡ ಬಿ.ವಿ. ಮಾತನಾಡಿ ಟಿಬೇಟಿಯನ್ನರು ಟಿಬೆಟ್ ಹೊರಗಡೆ ಪ್ರಜಾರಾಜ್ಯ ದಿನವನ್ನಾಚರಿಸುವ ವಾತಾವರಣ ನಿರ್ಮಾಣವಾಗಿರುವುದು ದುರದೃಷ್ಟಕರ. ಅಲ್ಲದೇ ಇದನ್ನು ದೇಶಾದ್ಯಂತ ಖಂಡಿಸಬೇಕು ಎಂದರು. ಜಗತ್ತಿನ ನಾಯಕರಾದ ಮಹಾತ್ಮಾಗಾಂಧಿ, ನೆಲ್ಸನ್ ಮಂಡೇಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ್ದರು. ಟಿಬೇಟಿಯನ್ನರು ತಾಯ್ನಾಡಿನಿಂದ ಹೊರದಬ್ಬಲ್ಪಟ್ಟರೂ ಅವರನ್ನು ಸಂಘಟಿಸುವಲ್ಲಿ ದಲೈಲಾಮಾ ಶ್ರಮಿಸಿದ್ದಾರೆ. ಅದೇ ನಿಜವಾದ ಪ್ರಜಾರಾಜ್ಯಕ್ಕೆ ಕಾರಣ. ವಿಶ್ವಸಂಸ್ಥೆಯು ಟಿಬೆಟ್ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಬೇಕು ಎಂದು ತಿಳಿಸಿದರು.

ತ್ಸೆರಿಂಗ್ ತಾಷಿ ಮತ್ತು ಲಕ್ಪಾ ತ್ಸೆರಿಂಗ್ ಮತ್ತಿತರರು ಉಪಸ್ಥಿತರಿದ್ದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

Leave a Reply

comments

Related Articles

error: