ದೇಶಪ್ರಮುಖ ಸುದ್ದಿವಿದೇಶ

ಅಮೆರಿಕದಿಂದ ಎಂ777 ಫಿರಂಗಿ ಖರೀದಿಗೆ ಭಾರತ ನಿರ್ಧಾರ

ನವದೆಹಲಿ: ಅಮೆರಿಕದಿಂದ ಭಾರತವು ಸುಮಾರು 5 ಸಾವಿರ ಕೋಟಿ ರೂ. ಮೌಲ್ಯದ 145 ಅತಿ ಹಗುರ ಫಿರಂಗಿ ಖರೀದಿಸಲು ನಿರ್ಧರಿಸಿದೆ. ಎಂ777 ಫಿರಂಗಿ ಖರೀದಿ ಕುರಿತ ಕಡತಕ್ಕೆ ರಕ್ಷಣಾ ಸಚಿವಾಲಯವು ಗುರುವಾರ ಅಂತಿಮ ರೂಪ ನೀಡಿದೆ.

25 ಕಿಲೋ ಮೀಟರ್ ವರೆಗೆ ಗುರಿಯಿಡಬಲ್ಲ ಫಿರಂಗಿಗಳ ಪೂರೈಕೆಗೆ ಸಚಿವಾಲಯವು ಕಾಲಮಿತಿ ನಿಗದಿಪಡಿಸಿದೆ ಎಂದು ತಿಳಿದುಬಂದಿದ್ದು, ಖಚಿತಿ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಚೀನಾ ಗಡಿಗೆ ಹೊಂದಿಕೊಂಡಿರುವ ಅರುಣಾಚಲ ಪ್ರದೇಶದ ಅತಿ ಎತ್ತರದ ಪ್ರದೇಶ, ಲಡಾಖ್‌ ವಲಯದಲ್ಲಿ ನಿಯೋಜಿಸಲು ಈ ಫಿರಂಗಿಗಳು ಭಾರತಕ್ಕೆ ಉಪಯುಕ್ತವಾಗಲಿವೆ. ಫಿರಂಗಿ ಖರೀದಿಸಲು ಆಸಕ್ತಿ ವಹಿಸಿ ಭಾರತವು ಅಮೆರಿಕಕ್ಕೆ ಮನವಿಪತ್ರ ರವಾನಿಸಿತ್ತು. ಒಪ್ಪಿಗೆ ಪತ್ರದೊಂದಿಗೆ (ಎಲ್‌ಒಎ) ಅಮೆರಿಕ ಪ್ರತಿಕ್ರಿಯೆ ನೀಡಿತ್ತು. ನಿಯಮ-ನಿಬಂಧನೆಗಳನ್ನು ಪರಿಶೀಲಿಸಿದ ನಂತರ ರಕ್ಷಣಾ ಸಚಿವಾಲಯ ಖರೀದಿ ವ್ಯವಹಾರಕ್ಕೆ ಅನುಮೋದನೆ ನೀಡಿದೆ. ಒಪ್ಪಂದದ ಪ್ರಕಾರ ಫಿರಂಗಿ ತಯಾರಿಕಾ ಕಂಪೆನಿ ಬೆಎಇ ಸಿಸ್ಟಮ್ಸ್, ಭಾರತದಲ್ಲಿ ಸುಮಾರು 1360 ಕೋಟಿ ರೂ. ಹೂಡಿಕೆ ಮಾಡಲಿದೆ. 25 ಫಿರಂಗಿಗಳು ಸಿದ್ಧ ರೂಪದಲ್ಲಿ ಭಾರತಕ್ಕೆ ತರಲಾಗುವುದು. ಉಳಿದವು ಭಾರತದಲ್ಲಿ ಮಹಿಂದ್ರಾ ಸಂಸ್ಥೆಯ ಪಾಲುದಾರಿಕೆಯಲ್ಲಿ ಜೋಡಿಸಿ ಪರೀಕ್ಷೆ ಬಳಿಕ ಹಸ್ತಾಂತರವಾಗಲಿವೆ.

1980ರಲ್ಲಿ ಭಾರತವು ಬೊಫೋರ್ಸ್ ಫಿರಂಗಿಗಳನ್ನು ಖರೀದಿಸಿತ್ತು. ಈ ವ್ಯವಹಾರದಲ್ಲಿ ಅಕ್ರಮ ನಡೆದಿದೆ ಎಂದು ಭಾರತದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿತ್ತು. ಇದರ ನಂತರ ಭಾರತ ಮೊದಲ ಬಾರಿ ಫಿರಂಗಿ ಖರೀದಿಗೆ ಮುಂದಾಗಿರುವುದು ಗಮನಾರ್ಹ.

Leave a Reply

comments

Related Articles

error: