ದೇಶಪ್ರಮುಖ ಸುದ್ದಿ

ಲವ್ ಜಿಹಾದ್ ಪ್ರಕರಣ : ರಾಷ್ಟ್ರೀಯ ತನಿಖಾದಳಕ್ಕೆ ವಹಿಸಿದ ಸುಪ್ರೀಂಕೋರ್ಟ್

ದೇಶ(ನವದೆಹಲಿ)ಆ.16:- ಸುಪ್ರೀಂಕೋರ್ಟ್ ಕೇರಳದ ಹಿಂದೂ ಯುವತಿಯೋರ್ವಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಮುಸ್ಲಿಂ ವ್ಯಕ್ತಿಯನ್ನು ವಿವಾಹವಾಗಿರುವ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾದಳಕ್ಕೆ ವಹಿಸಿದೆ.

ಈ ಯುವತಿಯು ತನ್ನ ಇಷ್ಟದಂತೆ ವಿವಾಹವಾಗಿದ್ದು, ಆಕೆಯನ್ನು ಆಕೆಯ ಪತಿಯಿಂದ ಹೇಗೆ ಬೇರ್ಪಡಿಸಲಾಗುತ್ತದೆ ಎಂದು ಪ್ರಶ್ನಿಸಿದೆ. ಎನ್ ಐ ಈ ಈ ಕುರಿತು ತನಿಖೆ ನಡೆಸುತ್ತಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ಅವರನ್ನೊಳಗೊಂಡ ನ್ಯಾಯಪೀಠ ಪ್ರಕರಣಕ್ಕೆ ಸಂಬಂಧಿಸಿ ಅಂತಿಮ ತೀರ್ಪು ಪ್ರಕಟಿಸುವುದಕ್ಕೂ ಮುನ್ನ ಯುವತಿಯ ವಿಚಾರಣೆಯನ್ನು ನಡೆಸಲಾಗುವುದು ಎಂದು ತಿಳಿಸಿದೆ. ತನಿಖೆಯ ಉಸ್ತುವಾರಿ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಅವರ ಹೆಗಲೇರಲಿದೆ.

ಶಪೀಜ್ ಜಹಾನ್ ಎಂಬವರನ್ನು 2016ರ ಡಿಸೆಂಬರ್ ನಲ್ಲಿ ವಿವಾಹವಾಗಿದ್ದ ಯುವತಿ ಅದಕ್ಕೂ ಮುನ್ನವೇ ಇಸ್ಲಾಂ ಧರ್ಮಕ್ಕೆ ಮತಾಂತಗೊಂಡಿದ್ದಳು. ಆದರೆ ಕೇರಳ ಉಚ್ಛನ್ಯಾಯಾಲಯ 2017ರ ಮೇ.24ರಂದು ಈ ವಿವಾಹ ಅಸಿಂಧು ಎಂದು ತಿಳಿಸಿತ್ತು. ಬಳಿಕ ಯುವತಿಯನ್ನು ಪಾಲಕರ ವಶಕ್ಕೊಪ್ಪಿಸಲಾಯಿತು. ಉಚ್ಛನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಯುವತಿಯ ಪತಿ ಸುಪ್ರೀಕೋರ್ಟ್ ಮೆಟ್ಟಿಲೇರಿದ್ದರು. ಯುವತಿಯ ಅಭಿಪ್ರಾಯ ಕೇಳಿದ ನಂತರವೇ ತೀರ್ಪು ಪ್ರಕಟಿಸುವಂತೆ ಮನವಿ ಮಾಡಿದ್ದರು. (ಎಸ್.ಎಚ್)

Leave a Reply

comments

Related Articles

error: