ಕರ್ನಾಟಕಪ್ರಮುಖ ಸುದ್ದಿ

ಡಿಕೆಶಿ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ: ಕೆ.ಎಸ್.ಈಶ್ವರಪ್ಪ

ಕಾರವಾರ,ಆ.16-ಇಂಧನ ಸಚಿವ ಡಿ‌.ಕೆ.ಶಿವಕುಮಾರ್ ತಕ್ಷಣ ರಾಜೀನಾಮೆ ಕೊಟ್ಟು ಐಟಿ ತನಿಖೆ ಎದುರಿಸಲಿ. ಅಕ್ರಮ ಆಸ್ತಿ ಮಾಡಿಲ್ಲವೆಂಬುದು ಸಾಬೀತಾದರೆ ಮತ್ತೆ ಸಚಿವರಾಗಲಿ ಎಂದು ವಿಧಾನ ಪರಿಷತ್ ವಿರೋದ ಪಕ್ಷದ ನಾಯಕ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂಧನ ಸಚಿವ ಡಿ.ಕೆ ಶಿವಕುಮಾರ್ ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ೩೦೦ ರಿಂದ ೪೦೦ ಕೋಟಿ ಅಕ್ರಮ ಆಸ್ತಿ ಇರುವುದು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಕೆಶಿ ಅವರನ್ನು ಸಮರ್ಥಿಸಿಕೊಳ್ಳುತ್ತಿರುವುದು ದುರಂತ. ತನ್ನ ಮನೆಯಲ್ಲಿ ನೋಟ್ ಎಣಿಸುವ ಮಿಷನ್ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.  ತಾನೊಬ್ಬ ವ್ಯಾಪಾರಸ್ಥ. ಈಗಲೂ ನನ್ನ ಮನೆಯಲ್ಲಿ ನೋಟ್ ಎಣಿಸುವ ಮಿಷನ್ ಇದೆ.  ನಾನೇನು ನೋಟ್ ಮುದ್ರಿಸುವ ಮಿಷನ್ ಇಟ್ಟಿಲ್ಲ. ಬಹುಶಃ ಕಾಂಗ್ರೆಸ್ ನವರು ನೋಟ್ ಮುದ್ರಿಸೋ ಮಿಷನ್ ಇಟ್ಟಿಕೊಂಡಿರಬಹುದು. ಯಡಿಯೂರಪ್ಪ ಭ್ರಷ್ಟ ಎಂದಿದ್ದಾರೆ. ಅವರ ಮೇಲಿರುವ ಎಲ್ಲಾ ಪ್ರಕರಣ ಕುಲಾಸೆಯಾಗಿದೆ ಎಂದರು.

ಇಂದಿರಾ ಕ್ಯಾಂಟಿನ್ ಪ್ರಾರಂಭ ನೆಪ ಮಾತ್ರಕ್ಕೆ ಮಾಡಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿರಾ ಕ್ಯಾಂಟಿನ್ ಅನ್ನು ಕೇವಲ ಪ್ರಚಾರಕ್ಕೆ ಬಳಸಿಕೊಂಡಿದ್ದಾರೆ. ಪ್ರಚಾರ ಬಿಟ್ಟು ಹೊಟ್ಟೆ ತುಂಬಾ ಆಹಾರವನ್ನ ನೀಡಲಿ. ಬೆಂಗಳೂರಿನ ಯಾವುದೇ ಮೂಲೆಯಲ್ಲಿ ಕ್ಯಾಂಟಿನ್ ಪ್ರಾರಂಭ ಮಾಡಿದರೆ ಉಪಯೋಗವಿಲ್ಲ. ರಾಜ್ಯದ ಎಲ್ಲಾ ಬಡವರಿಗೆ ಕ್ಯಾಂಟಿನ್ ನಿಂದ ಊಟ ನೀಡಿದರೆ ಅದು ಸ್ವಾಗತ ಎಂದು ಇಂದಿರಾ ಕ್ಯಾಂಟಿನ್ ಪ್ರಾರಂಭಕ್ಕೆ ಈಶ್ವರಪ್ಪ ವ್ಯಂಗ್ಯವಾಡಿದರು. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: