ದೇಶಪ್ರಮುಖ ಸುದ್ದಿ

ಏರ್ಟೆಲ್, ವೊಡಾಫೋನ್, ಐಡಿಯಾಗೆ 3,050 ಕೋಟಿ ರೂ. ದಂಡ: ಟ್ರಾಯ್ ಶಿಫಾರಸು

ನವದೆಹಲಿ: ರಿಲಯನ್ಸ್‌ ಜಿಯೊ ಮೊಬೈಲ್ ಸಂಪರ್ಕಜಾಲಕ್ಕೆ ಅಂತರ್‌ಸಂಪರ್ಕ ಕಲ್ಪಿಸಲು ನಿರಾಕರಿಸಿದ ಏರ್‌ಟೆಲ್, ವೊಡಾಫೋನ್ ಹಾಗೂ ಐಡಿಯ ಕಂಪನಿಗಳಿಗೆ 3,050 ಕೋಟಿ ದಂಡ ವಿಧಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದೆ.

ಶೇಕಡಾ 75 ರಷ್ಟು ಜಿಯೋ ಗ್ರಾಹಕರಿಗೆ ಈ ರೀತಿ ಅಡಚಣೆ ಆಗಿದ್ದು, ಅನ್ಯ ಕಂಪನಿಗಳು ಜಿಯೊ ಗ್ರಾಹಕರ ಕರೆ ಕಡಿತ ಮತ್ತು ಸಂಪರ್ಕ ನಿರ್ಬಂಧಿಸುವ ಮೂಲಕ ಟ್ರಾಯ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇದರಿಂದ ತಾವು ನಷ್ಟ ಅನುಭವಿಸುತ್ತಿದ್ದೇವೆ ಎಂದು ರಿಲಯನ್ಸ್ ಕಂಪನಿ ಟ್ರಾಯ್‌ಗೆ ದೂರು ನೀಡಿತ್ತು.

ಈ ದೂರು ಪರಿಶೀಲನೆ ನಡೆಸಿದ ನಂತರ, ಒಪ್ಪಂದದ ನಿಯಮ ಉಲ್ಲಂಘಿಸಿದ ಮೂರು ಮುಖ್ಯ ಕಂಪೆನಿಗಳಿಗೆ ದಂಡ ವಿಧಿಸುವಂತೆ ದೂರಸಂಪರ್ಕ ಸಚಿವಾಲಯಕ್ಕೆ ಟ್ರಾಯ್ ಶಿಫಾರಸು ಮಾಡಿದೆ.

Leave a Reply

comments

Related Articles

error: