ಕರ್ನಾಟಕ

ಒಗ್ಗಟ್ಟಿನಿಂದ ಪುರಸಭೆ ಅಭಿವೃದ್ದಿಪಡಿಸುವ ಕೆಲಸ ಮಾಡಲು ಸಲಹೆ ನೀಡಿದ ಶಾಸಕ ಹಾಗೂ ಸಂಸದರು

ರಾಜ್ಯ(ಮಂಡ್ಯ)ಆ.16:- ಪಾಂಡವಪುರ  ಪಟ್ಟಣದ ಪುರಸಭೆಯ ಸಂಭಾಗಣದಲ್ಲಿ ಪಟ್ಟಣ ಅಭಿವೃದ್ಧಿ ಕುರಿತಂತೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹಾಗೂ ಸಂಸದ ಸಿ.ಎಸ್.ಪುಟ್ಟರಾಜು ಅವರು ನೇತೃತ್ವದಲ್ಲಿ  ವಿಶೇಷ ಸಭೆ ನಡೆಯಿತು.
ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಪುರಸಭೆ ಸದಸ್ಯ ಸತೀಶ್ ಮಾತನಾಡಿ, ಪುರಸಭೆಯಲ್ಲಿ ಸರಿಯಾಗಿ ಸಭೆಯನ್ನೇ ಕರೆಯುತ್ತಿಲ್ಲ, ಈ ಬಗ್ಗೆ ಅಧ್ಯಕ್ಷೆ ವಿನುತ ಅವರನ್ನು ಕೇಳಿದರೆ ನಾನು ಸಂಸದರು ಹೇಳುವವರೆಗೂ ಸಭೆಯನ್ನು ಕರೆಯುವುದಿಲ್ಲ ಎಂದು ಹೇಳುತ್ತಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಂಸದ ಸಿ.ಎಸ್.ಪುಟ್ಟರಾಜು ಅಧ್ಯಕ್ಷೆ ವಿನುತರನ್ನು ತರಾಟೆಗೆ ತೆಗೆದುಕೊಂಡರು. ನಾನು ಯಾವತ್ತು ನನ್ನ ಕೇಳಿ ಸಭೆ ಕರೆಯುವಂತೆ ಹೇಳಿದ್ದೇನೆ, ಸಭೆ ಕರೆಯುವು ಅಧಿಕಾರ ಅಧ್ಯಕ್ಷರಿಗಿದೆ ಅದನ್ನುಬಿಟ್ಟು ನಿಮ್ಮ ವೈಮನಸ್ಸಿನಿಂದ ನನ್ನ ಮೇಲೆ ಹೇಳುವುದು ಸರಿಯಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ನಾನು ಆ ರೀತಿಯಾಗಿ ಯಾರಿಗೂ ಹೇಳಿಲ್ಲ, ಇದು ನನ್ನ ಮೇಲೆ ಮಾಡುತ್ತಿರುವ ಸುಳ್ಳು ಆರೋಪ ಎಂದರು. ಸತೀಶ್ ಮಾತನಾಡಿ ನೀವು ಈ ರೀತಿ ಹೇಳಿಲ್ಲವಾದರೆ ಇಲ್ಲಿರುವ ಯಾವೊಬ್ಬ ಸದಸ್ಯರಿಂದಲಾದರೂ ಹೇಳಿಸಿ ನೋಡೋಣ ಎಂದು ಸವಾಲು ಹಾಕಿದರು. ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ಪುಟ್ಟಣ್ಣಯ್ಯ ಈ ಚರ್ಚೆ ಇಲ್ಲಿಗೆ ನಿಲ್ಲಿಸಿ ಎಲ್ಲರೂ ಒಗ್ಗಟ್ಟಿನಿಂದ ಪುರಸಭೆ ಅಭಿವೃದ್ದಿಪಡಿಸುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಮಾತನಾಡಿ,ಪುರಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರ  ಹೊಂದಾಣಿಕೆಯ ಕೊರತೆಯಿಂದ ಅಭಿವೃದ್ದಿ ಕುಂಠಿತವಾಗುತ್ತಿದೆ. ಕಳೆದ ಎರಡು ವಿಶೇಷ ಸಭೆಗೆ ಆಡಳಿತ ಪಕ್ಷದ ಸದಸ್ಯರೇ ಗೈರು ಹಾಜರಾಗಿದ್ದಾರೆ. ಇದು ಸರಿಯಾದ ಬೆಳವಣಿಗೆಯಲ್ಲಿ ರಾಜಕೀಯ, ವೈಮನಸ್ಸುಬಿಟ್ಟು ಎಲ್ಲಾ ಸದಸ್ಯರು ಪುರಸಭೆಯ ಅಭಿವೃದ್ದಿಗೆ ಕೆಲಸ ಮಾಡಬೇಕು ಎಂದರು.
ಸಂಸದ ಸಿ.ಎಸ್.ಪುಟ್ಟರಾಜು ಮಾತನಾಡಿ, ಪ್ರತಿ ತಿಂಗಳು ಸಾಮಾನ್ಯ ಸಭೆ ಕರೆಯುತ್ತಿದ್ದೀರಾ ಎಂದು ಪ್ರಶ್ನಿಸಿದರು, ಇದಕ್ಕೆ ಪ್ರತಿಕ್ರಿಸಿದ ಸದಸ್ಯರು ಪ್ರತಿ ತಿಂಗಳು ಸಾಮಾನ್ಯ ಸಭೆ ಕರೆಯುತ್ತಿಲ್ಲ ಎಂದು ಉತ್ತರಿಸಿದರು, ಪ್ರತಿ ತಿಂಗಳು ಸಭೆ ಕರೆದು ಪುರಸಭೆಯ ಬಗ್ಗೆ ಚರ್ಚಿಸಿ ಪುರಸಭೆ ಮುಖ್ಯಾಧಿಕಾರಿಗಳು ಈ ಬಗ್ಗೆ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ವಿನುತಶಿವಣ್ಣ, ಉಪಾಧ್ಯಕ್ಷ ರಾಧಾಮಣಿ, ಮುಖ್ಯಾಧಿಕಾರಿ ಮಂಜುನಾಥ್, ಪುರಸಭೆಯ ಎಲ್ಲಾ ಸದಸ್ಯರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: