ಸುದ್ದಿ ಸಂಕ್ಷಿಪ್ತ

ಆ.20ರಂದು ವೀರ ಯೋಧರಿಗೆ ಸನ್ಮಾನ

ಮೈಸೂರು.ಆ.16 : ಸಾರ್ವಜನಿಕ ಒಳಿತಿಗಾಗಿ ಸ್ಚಚ್ಛ ಭಾರತ್, ಸ್ವಚ್ಛ ಮೈಸೂರು ನಿರ್ಮಾಣಕ್ಕಾಗಿ ಸಹಕರಿಸಿ ಸಂಸ್ಥೆಯಿಂದ 71ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ವೀರ ಯೋಧರಿಗೆ ಸನ್ಮಾನವನ್ನು ಆ.20ರಂದು ಸಂಜೆ 6ಕ್ಕೆ ಟೀಚರ್ಸ್ ಲೇಔಟ್ ನ ಮೌಲಾನಾ ಆಜಾದ್ ಶಾಲಾ ಪಕ್ಕದಲ್ಲಿರುವ ಮೈದಾನದಲ್ಲಿ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ರಾಮಕೃಷ್ಣ ಆಶ್ರಮದ ಸ್ವಾಮಿ ಮಹಾರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್, ಡಿ.ಸಿ.ಪಿ, ಎನ್.ವಿಷ್ಣುವರ್ಧನ್, ಪಾಲಿಕೆ ಸದಸ್ಯ ರಜನಿ ಅಣ್ಣಯ್ಯ ಮೊದಲಾದವರು ಭಾಗವಹಿಸುವರು. ಕಾರ್ಯಕ್ರಮದಂಗವಾಗಿ ಜಾದೂ ಪ್ರದರ್ಶನ ಹಾಗೂ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: