ಮೈಸೂರು

ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಪೌರ ಕಾರ್ಮಿಕ ಜಂಟಿ ದಿನಾಚರಣೆ

ಡಾ.ಬಿ.ಆರ್.ಅಂಬೇಡ್ಕರ್ ಅವರ 125ನೇ ಜನ್ಮ ವರ್ಷಾಚರಣೆ ಹಾಗೂ ಪೌರ ಕಾರ್ಮಿಕ ದಿನಾಚರಣೆಯನ್ನು ಜಂಟಿಯಾಗಿ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಪರಿಶಿಷ್ಟ ಜಾತಿ ವರ್ಗದ ನೌಕರರ ಸಂಘದ ಅಧ್ಯಕ್ಷ ಮಾರ ತಿಳಿಸಿದರು.

ಅವರು, ನಗರದ ಪತ್ರಕರ್ತರ ಭವನದಲ್ಲಿಂದು (ಅ.22) ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ ಅ.24ರಂದು ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಚಾಲನೆ ನೀಡುವರು. ಮಹಾಪೌರ ಬಿ.ಎಲ್.ಬೈರಪ್ಪ ಅವರು ಕೃಷ್ಣಮೂರ್ತಿ ಚಮರಂ ರಚಿತ ಭಾರತೀಯರೆಲ್ಲರ ಮಹಾ ಬೆಳಕು ಬಾಬಾ ಸಾಹೇಬ್ ಅಂಬೇಡ್ಕರ್ ಪುಸ್ತಕ ಬಿಡುಗಡೆಗೊಳಿಸುವರು.  ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಈ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ದಲಿತರು ಒಡೆದು ಹಂಚಿಹೋಗುತ್ತಿರುವ ಈ ಸಂದರ್ಭದಲ್ಲಿ ಹೆಚ್ಚು ಅರ್ಥಪೂರ್ಣವೆನಿಸುವುದು. ಕಾರ್ಯಕ್ರಮದಂಗವಾಗಿ ಈಗಾಗಲೇ ಪೌರ ಕಾರ್ಮಿಕ ಕುಟುಂಬದ ಮತ್ತು ಪಾಲಿಕೆ  ಸದಸ್ಯರಿಗಳಿಗೆ ಹಾಗೂ ಅಧಿಕಾರಿಗಳಿಗೆ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿಚಾರಸಂಕಿರಣಗಳು ಜರುಗಿದ್ದು ಸಮಾರಂಭದ ದಿನದಂದು ಬಹುಮಾನ ವಿತರಿಸಲಾಗುವುದು.

ಮಾಜಿ ಮಹಾಪೌರ ನಾರಾಯಣ್ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಹಾಗೂ ಇತರೆ ಪೌರ ಕಾರ್ಮಿಕರ ನೌಕರರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

‘ಸಂತಸ – ಅಭಿನಂದನೆ’ : ಪೌರಕಾರ್ಮಿಕರ ಮಾಸಿಕ ವೇತನ ಎಂಟು ಸಾವಿರದಿಂದ 14 ಸಾವಿರಕ್ಕೆ ಏರಿಕೆ ಮಾಡಿರುವುದು ಸಂತಸ ತಂದಿದ್ದು, ನೂತನ ವೇತನ ಜಾರಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ನಾರಾಯಣ್, ಜಿಲ್ಲಾಧಿಕಾರಿ ರಂದೀಪ್,  ಜಿಲ್ಲಾ ಉಸ್ತುವಾರಿ ಸಚಿವರಿಗೆ, ಶಾಸಕರಿಗೆ ಹಾಗೂ ಪಾಲಿಕೆ ಆಯುಕ್ತ ಜಗದೀಶ್ ಗೆ ಅಭಿನಂದನೆ ಸಲ್ಲಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಸಂಚಾಲಕ ಜಿ.ಶಿವಸಿದ್ದು, ಜಿಲ್ಲಾಧ್ಯಕ್ಷ ನರಸಿಂಹ, ಖಜಾಂಚಿ ಮಹದೇವ ಹಾಗೂ ವೆಂಕಟೇಶ್ ಉಪಸ್ಥಿತರಿದ್ದರು.

Leave a Reply

comments

Related Articles

error: