ಮೈಸೂರು

ಸಡಗರ-ಸಂಭ್ರಮದಿಂದ ನಡೆದ ಸ್ವಾತಂತ್ರ್ಯೋತ್ಸವ ಆಚರಣೆ

ಮೈಸೂರು,ಆ.16:- ಮೈಸೂರಿನ ಪೋದಾರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ   ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮ ಬಹಳ ಸಂಭ್ರಮದಿಂದ ನೆರವೇರಿತು. ವಂದೇ ಮಾತರಂ ಗೀತೆಯೊಂದಿಗೆ  ಕಾರ್ಯಕ್ರಮ ಆರಂಭಗೊಂಡಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ಕರ್ನಲ್  ರವಿ ಶಿರಹಟ್ಟಿ  ಧ್ವಜಾರೋಹಣವನ್ನು ನೆರವೇರಿಸಿದರು. ನಂತರ  ಶಾಲಾ ಮಕ್ಕಳು  ಶಿಸ್ತುಬದ್ಧ  ಪಥಸಂಚಲನ ನಡೆಸಿದರು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ‘ಬೇಟಿ ಬಚಾವೋ’ ಹಾಗೂ ‘ಸ್ವಚ್ಛ ಭಾರತ್  ಸ್ವಸ್ಥ ಭಾರತ್’ ಎಂಬ ನೃತ್ಯ  ರೂಪಕವನ್ನು ಪ್ರದರ್ಶಿಸಿ ಎಲ್ಲರ ಮನಸ್ಸಿನಲ್ಲಿ ಸಂಚಲನವನ್ನು ಮೂಡಿಸಿದರು.  ಕನ್ನಡ ಹಾಗೂ ಹಿಂದಿ ಭಾಷೆಯ  ಸರಳ  ಶೈಲಿಯಲ್ಲಿ ಮಾಡಿದ ಮಕ್ಕಳ ಸುಸ್ಪಷ್ಟ  ಭಾಷಣ ಎಲ್ಲರ ಮನದಲ್ಲಿ ದೇಶಭಕ್ತಿ ಮೂಡಿಸಿತು. ಪೋದಾರ್  ಶಾಲೆಯಲ್ಲಿ  5 ವರ್ಷಗಳ ಕಾಲ ಸೇವೆ ಸಲ್ಲಿಸಿದ ಶಿಕ್ಷಕರನ್ನು ಸಂಸ್ಥೆಯ ಪರವಾಗಿ ಪ್ರಾಂಶುಪಾಲರು ಸನ್ಮಾನಿಸಿದರು.  ಕರ್ನಲ್  ರವಿ  ಶಿರಹಟ್ಟಿ  ಮಾತನಾಡಿ  ವಿದ್ಯಾರ್ಥಿಗಳಿಗೆ ದೇಶಸೇವೆ ಹಾಗೂ ದೇಶಭಕ್ತಿಯ ಮಹತ್ವವನ್ನು ವಿವರಿಸಿದರು.  ಶಾಲಾ ಪ್ರಾಂಶುಪಾಲ ಕೃಷ್ಣ ಬಂಗೇರ ಅಧ್ಯಕ್ಷತೆ ವಹಿಸಿದ್ದರು.  ವಿದ್ಯಾರ್ಥಿಗಳು ಸೇರಿದಂತೆ ಶಿಕ್ಷಕರು, ಶಿಕ್ಷಕೇತರ ವೃಂದ ಪಾಲ್ಗೊಂಡಿದ್ದರು. (ಜಿ.ಕೆ, ಎಸ್.ಎಚ್)

Leave a Reply

comments

Related Articles

error: