ಮೈಸೂರು

ಸಶಸ್ತ್ರ ಪಡೆ ಸಿಬ್ಬಂದಿಗೆ ಕಾನೂನು ಅರಿವು ಮುಖ್ಯ: ನ್ಯಾ. ಜಯಂತ್ ಪಟೇಲ್

ಸಶಸ್ತ್ರ ಪಡೆ ಸಿಬ್ಬಂದಿ ಮತ್ತು ಅವರ ಕುಟುಂಬದವರು ಕುಂದುಕೊರೆತಗಳನ್ನು ನಿವಾರಿಸಲು ಕಾನೂನು ಅರಿವು ಹೊಂದಿರುವುದು ಅವಶ್ಯಕ ಎಂದು ಹೈಕೋರ್ಟ್ ನ್ಯಾಯಾಧೀಶ ಜಯಂತ್ ಪಟೇಲ್ ಹೇಳಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸೈನಿಕರ ಕ್ಷೇಮಾಭಿವೃದ್ಧಿ ಇಲಾಖೆ ವತಿಯಿಂದ ಶನಿವಾರದಂದು ಸಶಸ್ತ್ರ ಪಡೆ ಸಿಬ್ಬಂದಿಗಾಗಿ ಆಯೋಜಿಸಿದ್ದ ‘ಕಾನೂನು ಅರಿವು ಕಾರ್ಯಾಗಾರ’ ಉದ್ಘಾಟಿಸಿ ಮಾತನಾಡಿದರು. ಸಶಸ್ತ್ರ ಪಡೆ ದೇಶದ ಬೆನ್ನೆಲುಬಾಗಿದ್ದು, ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.

ಸಶಸ್ತ್ರ ಪಡೆ ನ್ಯಾಯಮಂಡಳಿ ರಚನೆ ಬಳಿಕ ಸುಮಾರು 25 ಪ್ರಕರಣಗಳು ಹೈಕೋರ್ಟ್‍ನಿಂದ ನ್ಯಾಯಮಂಡಳಿಗೆ ಹಸ್ತಾಂತರವಾಗಿವೆ. ಆದರೆ, ಈ ಮಂಡಳಿ ರಚನೆಯಾದ ಬಳಿಕ ದಾಖಲಾಗಿರುವ ಪ್ರಕರಣಗಳ ಸಂಖ್ಯೆ ಕಡಿಮೆ. ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳು ಕಡಿಮೆಯಾಗಿವೆ ಎಂದು ಭಾವಿಸಿದ್ದೇವೆ ಎಂದು ನ್ಯಾಯಾಧೀಶ ಜಯಂತ್ ಪಟೇಲ್ ಅಭಿಪ್ರಾಯಪಟ್ಟರು.

ಸಶಸ್ತ್ರ ಪಡೆ ನ್ಯಾಯಮಂಡಳಿಯ ಸದಸ್ಯ ಎಂ.ಪಿ. ಮುರಳಿಧರನ್ ಮಾತನಾಡಿ, 2008 ರಲ್ಲಿ ಸಶಸ್ತ್ರ ಪಡೆ ಸಿಬ್ಬಂದಿ ಸಮಸ್ಯೆ ನಿವಾರಿಸಲು ನ್ಯಾಯಮಂಡಳಿ ಸ್ಥಾಪಿಸಲು ಸರಕಾರ ನಿರ್ಧರಿಸಿತು. ನ್ಯಾಯಮಂಡಳಿಯ ಬಗ್ಗೆ ಅರಿವಿನ ಕೊರತೆಯಿದ್ದು, ಈ ರೀತಿಯ ಕಾರ್ಯಾಗಾರಗಳು ಕಾನೂನು ಅರಿವು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು.

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್. ಮುದ್ಗಲ್, ಸಹಾಯಕ ಕಮಿಷನರ್ ಸಿ.ಎಲ್. ಆನಂದ್, ಮೈಸೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್. ಚಂದ್ರಮೌಳಿ ಉಪಸ್ಥಿತರಿದ್ದರು.

Leave a Reply

comments

Related Articles

error: