ಪ್ರಮುಖ ಸುದ್ದಿ

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಂಚೆ ನೌಕರರ ಪ್ರತಿಭಟನೆ

ಪ್ರಮುಖ ಸುದ್ದಿ, ಮಂಡ್ಯ, ಆ.೧೬: ಜಿಡಿಎಸ್ ಕಮಿಟಿ ವರದಿ ಜಾರಿಗೆ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದ ವತಿಯಿಂದ ನಗರದ ಪ್ರಧಾನ ಅಂಚೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಪ್ರಧಾನ ಅಂಚೆ ಕಚೇರಿ ಎದುರು ಜಮಾಯಿಸಿದ ಸಂಘದ ಪದಾಧಿಕಾರಿಗಳು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಘೋಷಣೆ ಕೂಗಿದರು. ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘದ ಅಧ್ಯಕ್ಷ ಎನ್.ಕೆ.ಚಲುವರಾಜು ಮಾತನಾಡಿ, ಗ್ರಾಮೀಣ ಅಂಚೆ ನೌಕರರ ಸೇವೆಯನ್ನು ಎಂಟು ಗಂಟೆ ಖಾಯಂಗೊಳಿಸುವುದು. ಮದ್ರಾಸ್ ಮತ್ತು ದೆಹಲಿ ನ್ಯಾಯಾಲಯದ ತೀರ್ಮಾನದಂತೆ ಜಿಡಿಎಸ್ ನೌಕರರಿಗೆ ಪಿಂಚಣಿ ಸೌಲಭ್ಯ್ ದೊರಕಿಸುವುದು. ಟಾರ್ಗೆಟ್ ಹೆಸರಿನಲ್ಲಿ ಗ್ರಾಮೀಣ ಅಂಚೆ ನೌಕರರ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿಭಾಗದ ಉಪಾಧ್ಯಕ್ಷ ಎನ್.ಕೆ.ಸತೀಶ್‌ಚಂದ್ರ, ಕಾರ್ಯದರ್ಶಿ ಶ್ರೀನಿವಾಸ, ಖಜಾಂಚಿ ಎಂ.ಕೆ.ಶಿವಲಿಂಗಯ್ಯ, ಕೆ.ವಿ.ಆನಂದ, ಡಿ.ರಂಗಸ್ವಾಮಿ, ರಾಜೇಶ್, ಹೊನ್ನೇಗೌಡ, ಶ್ರೀಕಾಂತ್, ಸುಧಾ, ಸರಸ್ವತಿ, ಜ್ಯೋತಿ, ಸಾಧನಾ, ವಸಂತ, ಭಾಗ್ಯಮ್ಮ, ಪ್ರಭಾಮಣಿ ಇತರರು ಭಾಗವಹಿಸಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: