ಕರ್ನಾಟಕಮೈಸೂರು

ಬ್ಯಾಂಕ್ ಖಾತೆ ಜೊತೆ ಆಧಾರ್ ಸಂಖ್ಯೆ ಜೋಡಣೆ : ಪಿಂಚಣಿದಾರರಿಗೆ ತಹಸಿಲ್ದಾರ್ ಸೂಚನೆ

ಮಂಡ್ಯ, ಆ.17 : ಫಲಾನುಭವಿಗಳು ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ನೀಡದಿದ್ದಲ್ಲಿ ನೀಡಲಾಗುತ್ತಿರುವ ಪಿಂಚಣಿ ಸೌಲಭ್ಯ ಸ್ಥಗಿತಗೊಳ್ಳವುದು ಎಂದು ಮಂಡ್ಯ ತಾಲ್ಲೂಕು ತಹಶೀಲ್ದಾರರು ತಿಳಿಸಿದ್ದಾರೆ.

ಮಂಡ್ಯ ತಾಲ್ಲೂಕು ವ್ಯಾಪ್ತಿಯ ಗ್ರಾಮಗಳು ಹಾಗೂ ನಗರ ಪ್ರದೇಶಗಳಲ್ಲಿ ಸಾಮಾಜಿಕ ಭದ್ರತಾ ಯೋಜನೆಯ ಸಂಧ್ಯಾಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ, ಇಂದಿರಾಗಾಂಧಿ ವೃದ್ಧಾಪ್ಯ ವೇತನ, ಮನಸ್ವಿನಿ ಹಾಗೂ ಮೈತ್ರಿ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ ಫಲಾನುಭವಿಗಳು ಆಧಾರ್ ಸಂಖ್ಯೆ ಹಾಗೂ ಅಂಚೆ ಕಛೇರಿ ಅಥವಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆ ಜೋಡಣೆ ಮಾಡದೆ ಇರುವ ಫಲಾನುಭವಿಗಳು ಸಂಬಂಧಪಟ್ಟ ಗ್ರಾಮಲೆಕ್ಕಾಧಿಕಾರಿಗಳಿಗೆ ಅಥವಾ ಆಯಾ ನಾಡಕಛೇರಿಗಳಿಗೆ ಕಡ್ಡಾಯವಾಗಿ ಆಧಾರ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ಸಂಖ್ಯೆಯನ್ನು ನೀಡಬೇಕು.

ಫಲಾನುಭವಿಗಳು ಆಧಾರ್ ಸಂಖ್ಯೆ ಹಾಗೂ ಅಂಚೆ ಕಛೇರಿ ಅಥವಾ ಬ್ಯಾಂಕ್ ಉಳಿತಾಯ ಖಾತೆ ಸಂಖ್ಯೆಯನ್ನು ಮಂಡ್ಯ ನಗರ ಕಸಬಾ ಹೋಬಳಿ ವ್ಯಾಪ್ತಿಯ ಫಲಾನುಭವಿಗಳು ಶ್ರೀಲಕ್ಷ್ಮೀಜನಾರ್ಧನಸ್ವಾಮಿ ದೇವಸ್ಥಾನ ಪೇಟೆಬೀದಿ ಬಳಿ ಇರುವ ಮಂಡ್ಯ ಕಸಬಾ ಗ್ರಾಮಲೆಕ್ಕಾಧಿಕಾರಿಗಳ ಕಛೇರಿಗೆ ನೀಡಬೇಕು. ತಗ್ಗಹಳ್ಳಿ ನಾಡಕಛೇರಿ ವ್ಯಾಪ್ತಿಗೆ ಸೇರುವ ನಗರ ಪ್ರದೇಶದ ಫಲಾನುಭವಿಗಳು ಗುತ್ತಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಭಾಗ ಇರುವ ಗ್ರಾಮಲೆಕ್ಕಾಧಿಕಾರಿಗಳ ಕಛೇರಿಗೆ ಅಥವಾ ತಗ್ಗಹಳ್ಳಿ ನಾಡಕಛೇರಿಗೆ ನೀಡಬೇಕು.

-ಎನ್.ಬಿ.

Leave a Reply

comments

Related Articles

error: