ಸುದ್ದಿ ಸಂಕ್ಷಿಪ್ತ

ಕಾಣೆಯಾದ ಮಹಿಳೆ ಪತ್ತೆಗೆ ಸಹಕರಿಸಿ

ಚಾಮರಾಜನಗರ, ಆ. 17:-  ತಾಲೂಕಿನ ಅಮಚವಾಡಿ ಗ್ರಾಮದ ಮಹೇಶ್ ಅವರು ಆಗಸ್ಟ್ 12ರಂದು ಅವರ ಪತ್ನಿ ಮಂಜುಳ ಎಂಬಾಕೆ ತೋಟದ ಮನೆಯಿಂದ ಮಗನನ್ನು ಶಾಲೆಗೆ ಬಿಟ್ಟು ಬರುವುದಾಗಿ ತಿಳಿಸಿ ಹೋದವರು ಹಿಂದಿರುಗಿ ಬಂದಿರುವುದಿಲ್ಲ. ಎಲ್ಲ ಕಡೆ ವಿಚಾರಿಸಿದರೂ ಪತ್ತೆಯಾಗಿಲ್ಲ ಎಂಬ ಕಾರಣ ನೀಡಿ ದೂರು ಸಲ್ಲಿಸಿದ್ದಾರೆ.

ಮಂಜುಳ ಅವರು 27 ವರ್ಷದವರಾಗಿದ್ದು 5 ಅಡಿ ಎತ್ತರವಿರುತ್ತಾರೆ. ಗುಂಡು ಮುಖ, ಸಾದಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು ನೀಲಿ ಬಣ್ಣದ ಸೀರೆ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (08226-222243), ಚಾಮರಾಜನಗರ ಗ್ರಾಮಾಂತರ ಪೊಲೀಸ್ ಠಾಣೆ (08226-222092) ಅಥವಾ ಜಿಲ್ಲಾ ನಿಸ್ತಂತು ಕೊಠಡಿ (08226-222383)ಗೆ ತಿಳಿಸುವಂತೆ ನಗರದ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತಿಳಿಸಿದ್ದಾರೆ. (ಆರ್.ವಿ.ಎಸ್,ಎಸ್.ಎಚ್)

Leave a Reply

comments

Related Articles

error: