ಮೈಸೂರು

ಇಬ್ಬರು ಕಳ್ಳರ ಬಂಧನ: ೧ ಲಕ್ಷ ರೂ ಮೌಲ್ಯದ ಸೆಂಟ್ರಿಂಗ್ ಶೀಟ್ ವಶ

ಮೈಸೂರು, ಆ.೧೭: ಸೆಂಟ್ರಿಂಗ್ ಸಾಮಾನುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಕಳ್ಳರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
ಜಕಾವುಲ್ಲಾ, ಶಫಿವುಲ್ಲಾ ಬಂಧಿತ ಆರೋಪಿಗಳು. ಈ ಇಬ್ಬರು ವಿಜಯನಗರ ೪ನೇ ಹಂತದ ಮರಿಮಲ್ಲಪ್ಪ ವಿದ್ಯಾಸಂಸ್ಥೆಗೆ ಸೇರಿದ ಸ್ಥಳದ ಕಾಂಪೌಂಡ್ ಬಳಿ ಅನುಮಾನಾಸ್ಪದವಾಗಿ ನಿಂತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ವಿಜಯನಗರ ೪ನೇ ಹಂತದ ೨ನೇ ಫೇಸ್‌ನಲ್ಲಿರುವ ಸೈಟ್ ನಂ ೭೯೪೨ರ ಮುಂಭಾಗ ಇಟ್ಟಿದ್ದ ೧೧೦ ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳನ್ನು ಕಳ್ಳತನ ಮಾಡಿ ಅವುಗಳನ್ನು ಲಷ್ಕರ್ ಮೊಹಲ್ಲಾದ ದೊಡ್ಡ ಗುಜರಿಯಲ್ಲಿ ಮಾರಾಟ ಮಾಡಿರುವುದಾಗಿ ಸತ್ಯ ಬಾಯ್ಬಿಟ್ಟಿದ್ದಾರೆ. ಇವರು ನೀಡಿದ ಮಾಹಿತಿ ಮೇರೆಗೆ ೧ ಲಕ್ಷ ರೂ ಮೌಲ್ಯದ ೧೧೦ ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. (ವರದಿ ಬಿ.ಎಂ)

Leave a Reply

comments

Related Articles

error: