ಸುದ್ದಿ ಸಂಕ್ಷಿಪ್ತ
ಆ.19ರಂದು ಪಿಕ್ಸೆಲ್ ಪೀಪಲ್ ಸಂಸ್ಥೆಯಿಂದ ವಿಶ್ವ ಛಾಯಾಗ್ರಹಣ ದಿನಾಚರಣೆ
ಮೈಸೂರು.ಆ.17 : ಪಿಕ್ಸೆಲ್ ಪೀಪಲ್ ಸಂಸ್ಥೆಯು ಆ.19ರ ಬೆಳಗ್ಗೆ 10.30ಕ್ಕೆ ವಿಶ್ವಛಾಯಾಗ್ರಹಣ ದಿನಾಚರಣೆಯನ್ನು ಬೋಗಾದಿಯ ಸ್ನೇಹಕಿರಣ್ ಮೈಸೂರು ಸ್ಟಾಸ್ಟಿಕ್ ಸೊಸೈಟಿಯಲ್ಲಿ (ಸೆರೆಬ್ರಲ್ ಫಾಲ್ಸಿ ಪೀಡಿತ ಮಕ್ಕಳ) ಶಾಲೆಯಲ್ಲಿ ಹಮ್ಮಿ ಕೊಂಡಿದೆ.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಪುಷ್ಪಲತಾ ಚಿಕ್ಕಣ್ಣ, ಸ್ನೇಹ ಕಿರಣ ನಿರ್ದೇಶಕ ಎ.ಪಿ.ಜೇಮ್ಸ್, ಪ್ರಾಂಶುಪಾಲೆ ಸೋನಿಯ ಜೇಕಬ್ ಭಾಗವಹಿಸುವರು. ಅಧ್ಯಕ್ಷ ಬಿ.ರಾಜು ಅಧ್ಯಕ್ಷತೆ ವಹಿಸುವರು. ಉಪಾಧ್ಯಕ್ಷ ಜಿ.ಎಮ್,ಸುದರ್ಶನ್, ಕಾರ್ಯದರ್ಶಿ ಬಿ.ಮಂಜುನಾಥ್ ಮೊದಲಾದವರು ಪಾಲ್ಗೊಳ್ಳುವರು.
ನಂತರ ಅಂತರಾಷ್ಟ್ರೀಯ ಖ್ಯಾತಿಯ ಉದಯ್ ಜಾದುಗಾರ್ ಅವರಿಂದ ಜಾದೂ ಪ್ರದರ್ಶನ ಮತ್ತು ಛಾಯಾಗ್ರಾಹಕ ಕಲಾಕಾರ್ ಪ್ರಸಾದ್ ಗೆ ಸನ್ಮಾನವನ್ನು ಹಮ್ಮಿಕೊಳ್ಳಲಾಗಿದೆ. (ಕೆ.ಎಂ.ಆರ್)