ಕರ್ನಾಟಕಮೈಸೂರು

ನಾಲೆಗಳ ನೀರನ್ನು ಕೃಷಿಗೆ ಉಪಯೋಗಿಸಿಕೊಳ್ಳದಿರಲು ಮನವಿ

ಮಂಡ್ಯ, ಆ.17 : ಹೇಮಾವತಿ ಜಲಾಶಯಕ್ಕೆ ಪ್ರಸಕ್ತ ವರ್ಷ ನೀರಿನ ಒಳಹರಿವು ನಿರಾಶಾದಾಯಕವಾಗಿರುವುದರಿಂದ ನೀರಿನ ಅಭಾವ ನೀಗಿಸಿಕೊಳ್ಳಲು ಜಲಾಶಯದಲ್ಲಿರುವ ನೀರಿನ ಲಭ್ಯತೆಯನ್ನು ಅನುಸರಿಸಿ , ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹಾಗೂ ಕೆರೆಗಳಿಗೆ ನೀರನ್ನು ತುಂಬಿಸುವ ಸಲುವಾಗಿ ತಾತ್ಕಾಲಿಕವಾಗಿ ಆಗಸ್ಟ್ 10 ರಿಂದ ಹೇಮಾವತಿ ಎಡದಂಡೆ ನಾಲೆಯಲ್ಲಿ ನೀರನ್ನು ಹರಿಸಲಾಗುತ್ತಿದೆ. ಆದ್ದರಿಂದ ಅಚ್ಚುಕಟ್ಟಿನಲ್ಲಿ ಬರುವ ರೈತರು ನಾಲಾ ನೀರನ್ನು ಆಧರಿಸಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಮನವಿ ಮಾಡಲಾಗಿದೆ.

ರೈತರು ಇಚ್ಛಿಸಿದಲ್ಲಿ ಮಳೆಯ ಆಶ್ರಿತ ಬೆಳೆಗಳನ್ನು ಬೆಳೆಯಲು ಅಭ್ಯಂತರವಿರುವುದಿಲ್ಲ, ಯಾವುದೇ ನಾಲೆಗಳ ನೀರನ್ನು ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಬಾರದು. ರೈತರು ಅಚ್ಚುಕಟ್ಟಿನಲ್ಲಿ ನಾಲಾ ಆಶ್ರಿತ ನೀರಿನಿಂದ ಬೆಳೆಗಳನ್ನು ಬೆಳೆಯಲು ಪ್ರಯತ್ನಿಸಿದಲ್ಲಿ ಆಗಬಹುದಾದ ನಷ್ಟಕ್ಕೆ ಇಲಾಖೆ ಜವಾಬ್ದಾರಿಯಾಗಿರುವುದಿಲ್ಲ ಎಂದು ಕೃಷ್ಣರಾಜಪೇಟೆ ಹೇಮಾವತಿ ಎಡದಂಡೆ ನಾಲಾ ವಿಭಾಗ ನೀರಾವರಿ ಅಧಿಕಾರಿ ಮತ್ತು ಕಾರ್ಯಪಾಲಕ ಇಂಜಿನಿಯರ್ ಹೆಚ್.ಸಿ ನಾರಾಯಣ್ ಅವರು ತಿಳಿಸಿದ್ದಾರೆ.

-ಎನ್.ಬಿ.

Leave a Reply

comments

Related Articles

error: