ಸುದ್ದಿ ಸಂಕ್ಷಿಪ್ತ

ಗೌಡಳ್ಳಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮದಾನ

ಸೋಮವಾರಪೇಟೆ,ಆ.17-ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಮಡಿಕೇರಿ ನೆಹರು ಯುವಕೇಂದ್ರ, ತಾಲೂಕು ಯುವ ಒಕ್ಕೂಟ, ಶುಂಠಿಮಂಗಳೂರು ಬಸವೇಶ್ವರ ಯುವಕ ಸಂಘ ಆಶ್ರಯದಲ್ಲಿ  ಸ್ವಚ್ಚ ಭಾರತ ಆಂದೋಲನದ ಪ್ರಯುಕ್ತ ಗೌಡಳ್ಳಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರಮದಾನ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಗೌಡಳ್ಳಿ ಗ್ರಾಪಂ ಅಧ್ಯಕ್ಷ ಧರ್ಮಾಚಾರಿ, ಬಸವೇಶ್ವರ ಯುವಕ ಸಂಘದ ಅಧ್ಯಕ್ಷ ಎಂ.ಪಿ.ಲಿಂಗರಾಜು, ಪಿಡಿಒ ಲಿಖಿತ, ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣಪ್ಪ, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ರವಿ, ಗ್ರಾಪಂ ಉಪಾಧ್ಯಕ್ಷ ಹರೀಶ್, ರಾಷ್ಟ್ರೀಯ ಸೇವಾ ಕಾರ್ಯಕರ್ತೆ ಪ್ರಿಯಾ, ಮುಖ್ಯ ಶಿಕ್ಷಕ ಮಂಜಯ್ಯ ಇದ್ದರು. (ವರದಿ-ಕೆಸಿಐ, ಎಂ.ಎನ್)

Leave a Reply

comments

Related Articles

error: