
ಕರ್ನಾಟಕ
ಬೈಕ್ ಗೆ ಬಸ್ ಡಿಕ್ಕಿ ಮೂವರ ಸಾವು
ಕಲಬುರಗಿ,ಆ.18-ಬೈಕ್ ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕಲಬುರಗಿ ತಾಲೂಕಿನ ಫರಹತ್ತಬಾದ್ ಗ್ರಾಮದ ಶಹಬಾದ್ ಕ್ರಾಸ್ ಬಳಿ ನಡೆದಿದೆ.
ಬಾಬುರಾವ್ (45), ಅನಿತಾ (40) , ಶುಭಂ (5) ಮೃತಪಟ್ಟ ದುರ್ದೈವಿಗಳು. ಬಸವಕಲ್ಯಾಣದಿಂದ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ ಬೆಂಗಳೂರು ಮೂಲದ ಆರೆಂಜ್ ಟ್ರಾವೆಲ್ಸ್ಗೆ ಸೇರಿದ ಖಾಸಗಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆ ನಂತರ ಬಸ್ ಚಾಲಕ ಪರಾರಿಯಾಗಿದ್ದು, ಫರಹತ್ತಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)