ಕರ್ನಾಟಕ

ರಾಜ್ಯ ಸರ್ಕಾರ, ಡಿಕೆಶಿ ವಿರುದ್ಧ ಬಿಜೆಪಿಯವರ ಪ್ರತಿಭಟನೆ

ಬೆಂಗಳೂರು,ಆ.18-ಕಾಂಗ್ರೆಸ್ ಸರ್ಕಾರ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಬಿಜೆಪಿಯವರು ಫ್ರೀಡಂ ಪಾರ್ಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಫ್ರೀಡಂ ಪಾರ್ಕ್ ನಿಂದ ವಿಧಾನಸೌಧದವರೆಗಿನ ಪ್ರತಿಭಟನಾ ರ್ಯಾಲಿಗೆ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಮಾಜಿ ಡಿಸಿಎಂ ಆರ್.ಅಶೋಕ್, ಸಿ.ಟಿ.ರವಿ, ಡಿ.ಎಸ್.ವೀರಯ್ಯ, ಬಚ್ಚೇಗೌಡ  ಶಾಸಕ ನಾಗರಾಜು, ಗೋವಿಂದಕಾರಜೋಳ, ವಿಪಕ್ಷ ನಾಯಕ ಈಶ್ವರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

ಶಾಸಕ ಸಿ.ಟಿ.ರವಿ ಮಾತನಾಡಿ, ಸಿಎಂ ಭ್ರಷ್ಟಾಚಾರದ ರೈಲು ರಾಜ್ಯದಲ್ಲೆಲ್ಲ ಓಡಾಡುತ್ತಿದೆ. ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸಚಿವ ಡಿ.ಕೆ.ಶಿವಕುಮಾರ್ ಕೃಷಿಯ ಮೂಲಕ ಆದಾಯ ತೋರಿಸುತ್ತಾರೆ. ಯಾವ ಬೆಳೆ ಬೆಳೆದು ೯೦೦ ಕೋಟಿ ರೂ. ಹಣದ ಲೆಕ್ಕ ತೋರಿಸ್ತೀರಿ. ದಾಳಿಂಬೆ ಬೆಳೆದಿದ್ದೀರಾ? ಯಾವ ಬೆಳೆ ಬೆಳೆದಿದ್ದೀರಾ? ಅಷ್ಟೊಂದು ಹಣ ಕೃಷಿಯಿಂದ ಬರುತ್ತಾ? ಹೈಕಮಾಂಡ್ ಗೆ ಹಣ ಕೊಡೋಕೆ ಎಲ್ಲಿಂದ ಹಣ ಬರುತ್ತೆ? ಪ್ರಮಾಣಿಕವಾಗಿ ಕೆಲಸ ಮಾಡಿದ್ದೀರಾ? ರಾಜ್ಯದ ಜನರಿಗೆ ಮೋಸ ಮಾಡಿ ಸಂಪಾದಿಸಿದ್ದೀರಾ? ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

98 ರಲ್ಲಿ ಕೇವಲ ೫೮ ಲಕ್ಷ ರೂ. ಆಸ್ತಿ ತೋರಿಸಿದ್ದರು  ಇಂದು ೯೦೦ ಕೋಟಿ ರೂ. ಆಸ್ತಿ ಹೇಗೆ ಬಂತು? ಮೊದಲು ಭ್ರಷ್ಟ ಸಚಿರವನ್ನ ಸಂಪುಟದಿಂದ ಕೈ ಬಿಡಿ. ಮೇಟಿ ಅತ್ಯಾಚಾರ ಪ್ರಕರಣ ಹೊರ ಬಂತು. ಅವರಿಗೆ ಕೆಂಪಯ್ಯ, ಸಿಎಂ ಕ್ಲೀನ್ ಚಿಟ್ ಕೊಡಿಸಿದ್ದಾರೆ. ಬಿ ರಿಪೊಪರ್ಟ್ ಕೊಟ್ಟ ಅಧಿಕಾರಿಯನ್ನ ವಜಾ ಮಾಡಿದ್ದಾರೆ. ಮೇಟಿ ವಿದ್ಯೆ ಅಂದ್ರೆ ನಿಮ್ಮ ಮೇಟಿ ನೆನಪಾಗ್ತಾರೆ. ರೈತರ ನೆನಪಾಗೋದಿಲ್ಲ. ಬಿಜೆಪಿ‌ ನಿಮ್ಮ ವಿರುದ್ಧ ರಣವೀಳ್ಯ ಮಾಡಿದೆ  ನಿಮ್ಮನ್ನ ಜೈಲಿಗೆ ಕಳಿಸುವವರೆಗೆ ನಾವು ಸುಮ್ಮನಿರಲ್ಲ. ನಿನ್ನ ರೈಲು ಬಿಡುವ ಕಥೆ ಕೇಳೋಕೆ ನಾವು ರೆಡಿಯಿಲ್ಲ. ಸಿಎಂ ಮೊದಲು ನಿಮ್ಮ ಸಚಿವರನ್ನ ಮೊದಲು ವಜಾಮಾಡಿ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ವಿಪಕ್ಷ ನಾಯಕ ಈಶ್ವರಪ್ಪ ಮಾತನಾಡಿ, ದಿನೇಶ್ ಗುಂಡೂರಾವ್, ಜಾರ್ಜ್ ಭೂಮಿ ನುಂಗಿದ್ದಾರೆ. ಇದರ ಬಗ್ಗೆ ಯಾವ ಕ್ರಮ ಕೈಗೊಂಡಿದ್ದೀರಾ?  ಹಾಲಪ್ಪನ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ರಿ. ಆದರೆ ಇದೀಗ ಕೋರ್ಟ್ ಹಾಲಪ್ಪ ಅವರ ತಪ್ಪಿಲ್ಲ ಅಂತ ಕ್ಲೀನ್ ಚಿಟ್ ನೀಡಿದೆ. ಇದರ ಬಗ್ಗೆ ಏನ್ ಹೇಳ್ತೀರಿ? ಎಸಿಬಿ ಬಲೆ ಹಾಕಿ ನಮ್ಮನ್ನ ಹೆದರಿಸಲು ಮುಂದಾಗಿದ್ದೀರಾ. ನಾವು ಇದಕ್ಕೆಲ್ಲ ಕೇರ್ ಮಾಡಲ್ಲ. ಮೇಟಿ ವಿರುದ್ಧ ಮತ್ತೆ ಹೆಣ್ಣು ಮಗಳು ಧೈರ್ಯವಾಗಿ ಧ್ವನಿ ಎತ್ತಿದ್ದಾಳೆ. ಅವರ ಬೆಂಬಲಕ್ಕೆ ನಾವು ಇದ್ದೇವೆ. ನೀವು ಡಿಕೆಶಿ ರಮೇಶ್ ಅವರನ್ನ ಸಂಪುಟದಿಂದ ಕೈಬಿಡಿ. ನಮ್ಮ ಮೇಲೆ ನೂರಾರು ಕೇಸ್ ಹಾಕೋಕೆ ಮುಂದಾಗಿದ್ದೀರಿ ಇಂಥ ಸಾವಿರ ಕೇಸ್ ಹಾಕಿ ನಾವು ಹೆದರಲ್ಲ ಎಂದಿದ್ದಾರೆ.

ಸಿದ್ದರಾಮಯ್ಯನವರ ಭ್ರಷ್ಟಾಚಾರ ದಿನದಿನಕ್ಕೂ ಬಯಲಾಗುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡುತ್ತಿರುವ ರಾಜ್ಯ ಸರ್ಕಾರ ಬಿಜೆಪಿ ನಾಯಕರ ಮೇಲೆ ಸುಮ್ಮನೆ ಆರೋಪ ಮಾಡುತ್ತಾರೆ. ಕಟ್ಟಾ ಸುಬ್ರಮಣ್ಯ ನಾಯ್ಡು, ಬಿಎಸ್ ವೈ ವಿರುದ್ಧ ಮಾಡುತ್ತಾರೆ. ಆದರೆ ಇದೆಲ್ಲ ಸುಳ್ಳು ಆರೋಪ  ಅವರ ಮೇಲಿನ ಕೇಸ್ ಸುಪ್ರೀಂನಲ್ಲೇ ವಜಾ ಆಗಿವೆ. ನೀವು ಮತ್ತೆ ಮತ್ತೆ ಕೆದಕುವುದೇಕೆ? ಆದರೆ ನಿಮ್ಮ ಸಚಿವರು ಮಾಡಿರುವುದೇನು? ದಾಖಲೆಗಳನ್ನ ಇಟ್ಟುಕೊಂಡೇ ನಿಮ್ಮ ಸಚಿವರ ಮೇಲೆ ಐಟಿ ಅಧಿಕಾರಿಗಳು ರೈಡ್ ಮಾಡಿದ್ದಾರೆ. ಕಳ್ಳರ ಕಳ್ಳ ಸಿಎಂ ಸಿದ್ದರಾಮಯ್ಯ ಡಿಕೆಶಿ ಮನೆಯಲ್ಲಿ ಸಿಕ್ಕಿದ್ದೆಷ್ಟು ಲೆಕ್ಕ ಕೊಡ್ತೀರಾ? ಮಹದೇವಪ್ಪ ಮರಳು ದಂಧೆಯಲ್ಲಿ ಮುಳುಗಿದ್ದಾರೆ. ಮೈಸೂರಿನಲ್ಲಿ ಸಿಎಂ ಇದಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು.(ವರದಿ-ಎಸ್.ಎನ್, ಎಂ.ಎನ್)

 

Leave a Reply

comments

Related Articles

error: