ಮೈಸೂರು

ಕಾರ್ಬನ್ ಸ್ಮಾರ್ಟ್ ಕೆಪಿಎಲ್ 2017- ಮೈಸೂರು ವಾರಿಯರ್ಸ್ ತಂಡದ ಪಾಲುದಾರ ಘೋಷಣೆ

ಮೈಸೂರು,ಆ.18 : ಸೈಕಲ್ ಪ್ಯೂರ್ ಅಗರಬತ್ತೀಸ್ ಪ್ರಾಯೋಜಕತ್ವದ ಕಾರ್ಬನ್ ಸ್ಮಾರ್ಟ್ ಕೆಪಿಎಲ್ 2017ರ 6ನೇ ಆವೃತ್ತಿಗೆ ಮೈಸೂರು ವಾರಿಯರ್ಸ್ ತಂಡದ ಪಾಲುದಾರರಾಗಿ ನಗರದ ಉಷಾ ಕಿರಣ ಕಣ್ಣಿನ ಆಸ್ಪತ್ರೆ, ಡಾಕ್ಟ್ ಕ್ಲೆಫ್ಟ್ ಕಿಂಡರ್ಲೈಪ್ ಮತ್ತು ಕಲಿಸು ಫೌಂಡೇಶನ್  ಸಂಸ್ಥೆಗಳಿವೆ ಎಂದು ಮೈಸೂರು ವಾರಿಯರ್ಸ್ ಮಾಲೀಕರಾದ ಅರ್ಜುನ್ ರಂಗರವರು ಅಧಿಕೃತವಾಗಿ ಪ್ರಕಟಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮೈಸೂರು ವಾರಿಯರ್ಸ್ ತಂಡದ ಉದ್ದೇಶಿತ ಪಾಲುದಾರರನ್ನು ಘೋಷಿಸಿದ ಅವರು, ಪ್ರಸಕ್ತ ಸಾಲಿನ ಕ್ರಿಕೆಟ್ ಪಂದ್ಯಗಳಲ್ಲಿ ತಂಡವು ಬಾರಿಸುವ ಪ್ರತಿ ಬೌಂಡರಿಗೆ ಮತ್ತು ಪಡೆಯಲಾಗುವ ವಿಕೆಟ್ ಗಳ ಆಧಾರ ಮೇಲೆ ಪಡೆಯುವ ಹಣವನ್ನು ಪಾಲುದಾರರಿಗೆ ಸಮವಾಗಿ ಹಂಚಲಾಗುವುದು, ಆ ಮೂಲಕ ಹಣವು ಸಾಮಾಜಿಕ ಸದ್ದುದೇಶಕ್ಕೆ ಸದ್ಬಳಕೆಯಾಗುವುದು ಎಂದ ಅವರು, ಈ ನಿಟ್ಟಿನಲ್ಲಿ ಸಮಾಜಕ್ಕೆ ನಮ್ಮ ಸಂಸ್ಥೆಯ ಅಳಿಲು ಸೇವೆ ಎಂದು ಹೇಳಿದರು.

ಮೈಸೂರು ವಾರಿಯರ್ಸ್ ನೀಡುವ ದೇಣಿಗೆಯನ್ನು ಡಾಯ್ಚ್ ಕ್ಲೆಟ್ ಕಿಂಡರ್ಲೈಫ್ ಸಂಸ್ಥೆಯು ಮಕ್ಕಳ ಸೀಳು ತುಟಿ ಶಸ್ತ್ರ ಚಿಕಿತ್ಸೆಗಾಗಿ, ಉಷಾ ಕಿರಣ ಕಣ್ಣಿನ ಆಸ್ಪತ್ರೆಯೂ ಗ್ರಾಮೀಣ ಭಾಗದಲ್ಲಿ ಶಾಲೆಗಳಲ್ಲಿ ವಿಶೇಷ ತಪಾಸಣಾ ಶಿಬಿರ ಮತ್ತು ಶಸ್ತ್ರಚಿಕಿತ್ಸೆ ನಡೆಸಲು ಹಾಗೂ ಕಲಿಸು ಫೌಂಡೇಶನ್ ಸರ್ಕಾರಿ ಶಾಲೆಗಳಲ್ಲಿ ಗ್ರಂಥಾಲಯ ನಿರ್ಮಾಣಕ್ಕೆ ಬಳಸುವ ಮೂಲಕ ದೇಣಿಗೆಯನ್ನು ಸದುಪಯೋಗಪಡಿಸಕೊಳ್ಳಲಾಗುವುದು ಎಂದು ಸಂಸ್ಥೆಗಳ ಮುಖ್ಯಸ್ಥರು ಈ ಸಂದರ್ಭದಲ್ಲಿ ಘೋಷಿಸಿದರು.

ಸುದ್ದಿಗೋಷ್ಠಿಯಲ್ಲಿ ಕಲಿಸು ಫೌಂಡೇಶನ್ ನ ಯೋಜನಾಧಿಕಾರಿ ಪ್ರಗತಿ, ಡಾಯ್ಚ್ ಕ್ಲೆಟ್ ಕಿಂಡರ್ಲೈಫ್ ನ ಯೋಜನಾ ನಿರ್ದೇಶಕ ಡಾ.ಮನುಪ್ರಸಾದ್, ಉಷಾ ಕಿರಣ ಕಣ್ಣಿನ ಆಸ್ಪತ್ರೆಯ ಡಾ.ರವಿಶಂಕರ್, ಕೆ.ಎಸ್.ಸಿಎ ಮೈಸೂರು ವಲಯ ಸಂಚಾಲಕ ಬಾಲಚಂದ್ರ, ಸುರೇಶ್ ಮೊದಲಾದವರು ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: