ಸುದ್ದಿ ಸಂಕ್ಷಿಪ್ತ

ಏಣಗಿ ಬಾಳಪ್ಪ ನಿಧಕ್ಕೆ ಸಂತಾಪ ಸೂಚಿಸಿದ ರಂಗಾಯಣದ ನಿರ್ದೇಶಕಿ

ಮೈಸೂರು,ಆ.18-ಕನ್ನಡ ವೃತ್ತಿರಂಗಭೂಮಿಯ ಹಿರಿಯ ಚೇತನ ನಾಡೋಜ ಏಣಗಿ ಬಾಳಪ್ಪನವರ ನಿಧನ ಕನ್ನಡ ರಂಗಭೂಮಿಗೆ ಬಹುದೊಡ್ಡ ನಷ್ಟ. ಇಡೀ ಸಂಸಾರವೇ ರಂಗಭೂಮಿಯ ಏಳುಬೀಳುಗಳೊಂದಿಗೆ ತೊಡಗಿಸಿಕೊಂಡ ಅಪರೂಪದ ಉದಾಹರಣೆ ಬಾಳಪ್ಪ ಕುಟುಂಬದ್ದು. ಇವರ ಅಗಲಿಕೆಯ ದುಖಃವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರಿಗೆ ನೀಡಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ಕದಂ ಸಂತಾಪ ಸೂಚಿಸಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: