ಸುದ್ದಿ ಸಂಕ್ಷಿಪ್ತ

ಯೋಗ ಶಿಕ್ಷಕರ ತರಬೇತಿ ಶಿಬಿರಕ್ಕೆ ಚಾಲನೆ

ಮೈಸೂರು, ಆ.18: ಶ್ರೀ ಪರಮಹಂಸ ಯೋಗ ಮಹಾವಿದ್ಯಾಲಯದ ಆಶ್ರಯದಲ್ಲಿ 2 ತಿಂಗಳ ಅವಧಿಯ ಯೋಗ ಶಿಕ್ಷಕರ ತರಬೇತಿ ಶಿಬಿರಕ್ಕೆ ಯೋಗರತ್ನ ಸುದೇಶ್ ಚಂದ್ ಅವರು ಚಾಲನೆ ನೀಡಿದರು.  ನಂತರ ಮಾತನಾಡಿದ ಅವರು, ಇಂತಹ ಯೋಗ ಶಿಕ್ಷಕರ ಶಿಬಿರಗಳಿಂದ ಸಮಾಜದ ಆರೋಗ್ಯಾಭಿವೃದ್ಧಿ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ  ಯೋಗಪ್ರವೀಣ ಶಿವಪ್ರಕಾಶ್ ಗುರೂಜಿಯವರು ಮಾತನಾಡಿ, ಇಂದು ಸಮಾಜಕ್ಕೆ ಯೋಗ ಶಿಕ್ಷಕರ ಅವಶ್ಯಕತೆ ಬಹಳ ಇರುವುದರಿಂದ ಆ ದಿಶೆಯಲ್ಲಿ ಶ್ರೀ ಪರಮಹಂಸ ಯೋಗ ಮಹಾವಿದ್ಯಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ವಿವರಿಸಿದರು. ಯೋಗ ಶಿಕ್ಷಕರ ತರಬೇತಿ ಶಿಬಿರವು ಪ್ರತಿದಿನ ಬೆಳಿಗ್ಗೆ 7 ರಿಂದ 8.30 ರವರೆಗೆ ಮೀನಾಕ್ಷಿ ನಂ. 12/ಎ, 1 ನೇ ಮೇನ್, 4 ನೇ ಹಂತ, ಟಿ.ಕೆ.ಲೇ ಔಟ್, ಕಾಮಾಕ್ಷಿ ಆಸ್ಪತ್ರೆ ಹತ್ತಿರ, ಮೈಸೂರು ಇಲ್ಲಿ ನಡೆಸಲಾಗುತ್ತದೆ. ಆಸಕ್ತಿಯುಳ್ಳವರು ಹೆಚ್ಚಿನ ಮಾಹಿತಿಗಾಗಿ 9008727172 ಗೆ ಸಂಪರ್ಕಿಸಬಹುದಾಗಿದೆ. (ವರದಿ: ಎಲ್.ಜಿ)

Leave a Reply

comments

Related Articles

error: