ಸುದ್ದಿ ಸಂಕ್ಷಿಪ್ತ

ಆ.19ಕ್ಕೆ `ಬ್ರಹ್ಮಗಂಟು ಗಣೇಶೋತ್ಸವ’

ಮೈಸೂರು,ಆ.18-ಗಣೇಶ ಚತುರ್ಥಿಯ ಅಂಗವಾಗಿ ಜೀ ಕನ್ನಡ ವಾಹಿನಿ ಆ.19 ರಂದು ಸಂಜೆ 5 ಗಂಟೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ `ಬ್ರಹ್ಮಗಂಟು ಗಣೇಶೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಿದೆ. ಬ್ರಹ್ಮಗಂಟು ಧಾರವಾಹಿಯ ಮುಖ್ಯ ಪಾತ್ರಧಾರಿಗಳಾದ ಲಕ್ಕಿ-ಗೀತಾ, ನರಸಿಂಹ, ಸುಮತಿ, ಮಹಾಬಲ, ರೇವತಿ, ದತ್ತ, ಪಿಂಕಿ, ಗಿರಿಜಮ್ಮ, ಮಂಗಳ ಸೇರಿದಂತೆ ಇಡೀ ತಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರನ್ನು ರಂಜಿಸಲು ತಯಾರಾಗಿದೆ. ನಿರೂಪಕಿ ಅನುಶ್ರೀ ಕಾರ್ಯಕ್ರಮದ ನಿರೂಪಣೆಯ ಜವಬ್ದಾರಿ ಹೊತ್ತಿದ್ದಾರೆ. ಮಹರ್ಷಿ ವಾಣಿ ಕಾರ್ಯಕ್ರಮ 1000 ಸಂಚಿಕೆಗಳನ್ನು ಪೂರೈಸುತ್ತಿರುವ ಪ್ರಯುಕ್ತ ಸಮಾರಂಭದಲ್ಲಿ ಶ್ರೀ ಆನಂದ್ ಗುರೂಜಿ ಅವರನ್ನು ಸನ್ಮಾನಿಸಲಾಗುವುದು. ಬ್ರಹ್ಮಗಂಟು ಗಣೇಶೋತ್ಸವ ಸಂಭ್ರಮದಲ್ಲಿ ಶ್ರೀಗಳೇ ಮಹಾ ಮಂಗಳಾರತಿ ನೆರವೇರಿಸಲಿದ್ದಾರೆ. (ವರದಿ-ಎಂ.ಎನ್)

Leave a Reply

comments

Related Articles

error: