ಮೈಸೂರು

ಡಿಡಿಪಿಐ ಕಚೇರಿ ಆವರಣದ ಪಾರಂಪರಿಕ ಕಟ್ಟಡ ಕುಸಿತ

ಮೈಸೂರು,ಆ.18:- ಮೈಸೂರಿನ ಡಿಡಿಪಿಐ ಕಚೇರಿ ಆವರಣದ ಪಾರಂಪರಿಕ ಕಟ್ಟಡ ಕುಸಿತಗೊಂಡಿದ್ದು, ಕುಸಿದು ಬಿದ್ದ ಅವಶೇಷಗಳಡಿ ಸಿಲುಕಿದ 3 ದ್ವಿಚಕ್ರ ವಾಹನಗಳು ಜಖಂಗೊಂಡಿವೆ.

ಖಾಲಿ ಇದ್ದ ಪರಿಣಾಮ ಹಲವು ತಿಂಗಳಿಂದ ಪಾಳು ಬಿದ್ದಿದ್ದ ಪಾರಂಪರಿಕ ಕಟ್ಟಡ ಇಂದು ದಿಢೀರ್ ಕುಸಿದಿದೆ.ಪಾರಂಪರಿಕ ಇಲಾಖೆಯ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ಶಿಕ್ಷಕರು, ಕಚೇರಿಯ ವಾಹನ ಚಾಲಕರು ಪ್ರತಿನಿತ್ಯ ಇಲ್ಲಿ ಕುಳಿತುಕೊಳ್ಳುತ್ತಿದ್ದರು. ಆದರೆ ಇಂದು ಕಟ್ಟಡ ಕುಸಿದು ಬಿದ್ದ ಸಂದರ್ಭದಲ್ಲಿ ಯಾರು ಘಟನಾ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ. ಕಟ್ಟಡದ ಅವಶೇಷಗಳಡಿಯಲ್ಲಿ ಸಿಲುಕಿದ್ದ ಎರಡು ಬೈಕ್ ಗಳನ್ನು ಹೊರ ತೆಗೆಯುವ ಕಾರ್ಯ ಯಶಸ್ವಿಯಾಗಿದೆ. ಅವಶೇಷಗಳಡಿ ಸಿಲುಕಿರುವ ಮತ್ತೊಂದು ಬೈಕ್ ಹೊರತೆಗೆಯಲು ಪ್ರಯತ್ನ ನಡೆದಿದೆ. ಬಹಳಷ್ಟು ಶಿಥಿಲವಾಗಿದ್ದ ಪಾರಂಪರಿಕ ಕಟ್ಟಡದ ಮೇಲ್ಭಾಗದಲ್ಲಿ ಗಿಡಗಂಟಿಗಳು ಬೆಳೆದಿದ್ದವು. ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಮಳೆ ಸುರಿದ ಪರಿಣಾಮ ಪಾರಂಪರಿಕ ಕಟ್ಟಡ ಮತ್ತಷ್ಟು ಶಿಥಿಲಗೊಂಡು ಕುಸಿದು ಬಿದ್ದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: