ಸುದ್ದಿ ಸಂಕ್ಷಿಪ್ತ

ಮೈಸೂರು ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ: ಎಚ್‍.ಸಿ. ಮಹದೇವಪ್ಪ ವಿರುದ್ಧ ಬಿಜೆಪಿ ಕಿಡಿ

ಜಿಲ್ಲಾ ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಧೋರಣೆಯನ್ನು ಮೈಸೂರಿನ ಬಿಜೆಪಿ ಯುವಮೋರ್ಚಾ ಖಂಡಿಸಿದೆ. ಮೇಯರ್ ಬಿ.ಎಲ್. ಭೈರಪ್ಪನವರು ದಸರೆಗೆ 5 ಕೋಟಿ ರೂ. ಮಾತ್ರ ಬಿಡುಗಡೆಯಾಗಿದ್ದು, 11 ಕೋಟಿ ರೂ. ಬಾಕಿ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ. ಇದರಿಂದ ಆಗಬೇಕಿದ ಕಾಮಗಾರಿ ಸ್ಥಗಿತಗೊಂಡಿದ್ದು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ದಸರಾ ಮುಗಿದ ಬಳಿಕವೂ ಮೈಸೂರಿಗೆ ಅನುದಾನ ತರುವಲ್ಲಿ ಆಸಕ್ತಿ ತೋರದಿರುವುದು ಮೇಯರ್ ಅವರ ಹೇಳೀಕೆಯಲ್ಲೇ ಗೊತ್ತಾಗಿದೆ. ಮತ್ತೋಂದು ಕಡೆ 11 ಕೋಟಿ ರೂ. ವೆಚ್ಚದಲ್ಲಿ ನಾವು ದಸರಾ ತಯಾರಿ ಮಾಡಿಕೊಳ್ಳುತ್ತಿರುವುದಾಗಿ ದಸರೆಗೂ ಮುನ್ನ ಜಿಲ್ಲಾಧಿಕಾರಿ ರಂದೀಪ್ ಅವರು ಪತ್ರಿಕಾಗೋಷ್ಠಿ ಕರೆದು ಮಾಹಿತಿ ನೀಡಿದ್ದರು. ಆದರೆ ಇದೀಗ ಮೇಯರ್ 5 ಕೋಟಿ ರೂ. ಮಾತ್ರ ಬಿಡುಗಡೆಯಾಗಿದೆ 11 ಕೋಟಿ ಬರಬೇಕಿದೆ ಎನ್ನುತ್ತಾರೆ. ಇದರಲ್ಲಿ ಯಾವುದು ಸತ್ಯ ಎಂಬುದನ್ನ ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಜೊತೆಯಲ್ಲಿ ಅದ್ಧೂರಿತನವಿಲ್ಲದ ದಸರಾದಲ್ಲಿ ದೀಪಾಲಂಕಾರ ಬಿಟ್ಟರೆ ಮತ್ಯಾವ ಕೆಲಸವೂ ಆಗಿಲ್ಲ. ಮೈಸೂರಿನಲ್ಲಿ ಕೂಡು ರಸ್ತೆಗಳು ಸೇರಿದಂತೆ ಅನೇಕ ಕಾಮಗಾರಿಗಳು ಆಗಬೇಕಿದೆ. ಮೈಸೂರು ಉಸ್ತುವಾರಿ ಸಚಿವರು ದಸರಾ ಉತ್ಸವದ ಅನುದಾನವನ್ನು ಈಗಲಾದರೂ ಬಿಡುಗಡೆ ಮಾಡಿಸಿಕೊಂಡು ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲಿ. ಮಗನನ್ನು ರಾಜಕೀಯವಾಗಿ ಬೆಳೆಸಲು ತೋರಿಸುತ್ತಿರುವ ಆಸಕ್ತಿಯನ್ನು ಮೈಸೂರು ಅಭಿವೃದ್ಧಿಗೆ ತೋರಿಸಲಿ ಎಂದು ಆಗ್ರಹಿಸಿದ್ದಾರೆ.

Leave a Reply

comments

Related Articles

error: