ಮೈಸೂರು

ಸಾಮಾಜಿಕ ಸೇವಾ ಕಾರ್ಯಕ್ರಮಗಳ ಮೂಲಕ ಬಿ.ಎಂ.ನಟರಾಜ್ ಹುಟ್ಟುಹಬ್ಬ ಆಚರಣೆ

ಮೈಸೂರು, ಆ.18: ನಗರಪಾಲಿಕೆ ಸದಸ್ಯ ಬಿ.ಎಂ.ನಟರಾಜು ಅವರ 50ನೇ ಹುಟ್ಟುಹಬ್ಬವನ್ನು ನರಸಿಂಹ ಕ್ಷೇತ್ರದಾದ್ಯಂತ ಅಭಿಮಾನಿಗಳು ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಆಚರಿಸಿದರು.

ಜ್ಯೋತಿನಗರದಲ್ಲಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಉಪಹಾರ ಒದಗಿಸುವುದರ ಮೂಲಕ ಹುಟ್ಟುಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಅಂಧ ವಿದ್ಯಾರ್ಥಿಗಳಿಗೆ ಫೈಲ್‌ಗಳ ವಿತರಣೆ ಮಾಡಲಾಯಿತು. ದ್ರಾವಿಡ ಉದ್ಯಾನವನದಲ್ಲಿ ಸಸಿಗಳನ್ನು ನೆಡಲಾಯಿತು. ಕ್ಯಾತಮಾರನಹಳ್ಳಿಯ 101 ಗಣಪತಿ ಯುವಕರ ಬಳಗದ ವತಿಯಿಂದ ಉಚಿತ ಕಣ್ಣಿನ ತಪಸಣಾ ಶಿಬಿರ ನಡೆಸಲಾಯಿತು. ಉಪ್ಪಾರ ಸಮುದಾಯ ಭವನದಲ್ಲಿ ರಕ್ತದಾನ ಶಿಬಿರ ಹಾಗೂ ರಕ್ತಗುಂಪಿನ ಪರೀಕ್ಷೆ ನಡೆಸಲಾಯಿತು.

ಎನ್.ಆರ್. ಮೊಹಲ್ಲಾದಲ್ಲಿ ನೇತ್ರದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಯಿತು. ನವಜೀವನಿಕೇತನ ಕೇಂದ್ರದ ಬುದ್ಧಿಮಾಂದ್ಯ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಲಾಯಿತು. ಕೆ.ಎನ್. ಪುರದಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು. ಗಾಂಧಿನಗರದಲ್ಲಿ ರಂಗೋಲಿ ಸ್ಪರ್ಧೆಯನ್ನು ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕುರಿಮಂಡಿಯ ಆಟೋಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು. ಲೀಡ್‌ಕರ್ ಕಾಲೋನಿಯಲ್ಲಿ ಹಾಗೂ ಮಾರಿಯಮ್ಮ ದೇವಸ್ಥಾನದಲ್ಲಿ ಮಹಿಳೆಯರಿಗೆ ಸೀರೆ ವಿತರಿಸಲಾಯಿತು. ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುನೇಶ್ವರನಗರ, ವೀರನಗೆರೆಗಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಲಾಯಿತು. ವಿದ್ಯಾನಗರದಲ್ಲಿ ಬಿ.ಎಂ. ನಟರಾಜ್ ಅಭಿಮಾನಿಬಳಗದ ವತಿಯಿಂದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಅಭಿನಂದಿಸಿ ಸಿಹಿ ವಿತರಿಸಲಾಯಿತು. (ವರದಿ ಬಿ.ಎಂ)

 

Leave a Reply

comments

Related Articles

error: