ಸುದ್ದಿ ಸಂಕ್ಷಿಪ್ತ

ಡಿ. 2-6: ರಾಜ್ಯ ಮಟ್ಟದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ

ಜೆಎಸ್ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ರಾಜ್ಯ ಮಟ್ಟದ ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಡಿ.2 ರಿಂದ ಡಿ.6 ರ ವರೆಗೆ ಮೈಸೂರಿನಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಭಾಗವಹಿಸುವವರು 16 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳಿಂದ 25 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ಪ್ರಮುಖವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ, ವಾದ್ಯಸಂಗೀತ ಹಾಗೂ ಲಯವಾದ್ಯ ಸಂಗೀತವನ್ನ ನಡೆಸಲು ಉದ್ದೇಶಿಸಲಾಗಿದೆ. ಪ್ರತಿ ಸ್ಪರ್ಧಿಗೂ 15 ನಿಮಿಷದ ಕಾಲಾವಕಾಶವಿದ್ದು, ರಾಗಾಲಾಪನೆ, ಸ್ವರಪ್ರಸ್ತಾರದೊಂದಿಗೆ ಯಾವುದಾದರು ಕೀರ್ತನೆಯನ್ನು ಸ್ಪರ್ಧಿಗಳು ಪ್ರಸ್ತುತಪಡಿಸಬೇಕಿದೆ. ಭಾಗವಹಿಸುವ ಸ್ಪರ್ಧಿಗಳು ತಮ್ಮ ಸ್ವವಿವರದೊಂದಿಗೆ ಬಿಳಿ ಕಾಗದದ ಮೇಲೆ ಬರೆದು ಅ.30ರೊಳಗೆ ಡಾ. ಪೂರ್ಣಿಮಾ ಕೃಷ್ಣಮೂರ್ತಿ, ಪ್ರಜ್ಞಾಕುಟೀರ, ಜೋಡಿರಸ್ತೆ ಕುವೆಂಪುನಗರ ಆಕ್ಸಿಸ್ ಬ್ಯಾಂಕ್ ಹತ್ತಿರ – ಇಲ್ಲಿಗೆ ತಲುಪಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಕೆ.ರಾಮಮೂರ್ತಿ ರಾವ್ – 9886379314 ಅಥವಾ ಯಶಸ್ವಿ- 9986700156 ಇವರನ್ನ ಸಂಪರ್ಕಿಸಬಹುದು.

Leave a Reply

comments

Related Articles

error: