ಸುದ್ದಿ ಸಂಕ್ಷಿಪ್ತ

ಕಾನೂನು ಅರಿವು ಕುರಿತು ಕಾರ್ಯಾಗಾರ

ಮಡಿಕೇರಿ,ಆ.18:-ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ಇವರ ಸಹಯೋಗದಲ್ಲಿ ವಿರಾಜಪೇಟೆ ಪಂಚಾಯಿತಿ ಭವನದಲ್ಲಿ ಹಿರಿಯ ನಾಗರಿಕರಿಗೆ 2007 ಕಾನೂನು ಕುರಿತಂತೆ ಕಾರ್ಯಾಗಾರವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಸಂಸ್ಥೆಯ ನಿರ್ದೇಶಕ ಪ್ರಭುಸ್ವಾಮಿ ಅವರು ಹಿರಿಯರ ರಕ್ಷಣೆ ಪಾಲನೆ, ಪೋಷಣೆ, ಕುರಿತಂತೆ ವಿವರಿಸಿದರು. ಜಿಲ್ಲಾ ಮಟ್ಟದಲ್ಲಿ ಇದಕ್ಕಾಗಿ ರಚಿಸಿರುವ ಉಪ ವಿಭಾಗಾಧಿಕಾರಿ ಮಟ್ಟದ ಸಮಿತಿಯ ಬಗ್ಗೆ ತಿಳಿಸಿದರು. ಕಾರ್ಯದರ್ಶಿ ಮಹದೇವಸ್ವಾಮಿ ಅವರು ಮಾತನಾಡಿ ಹಿರಿಯ ನಾಗರಿಕರ ಪರವಾಗಿ ಜಿಲ್ಲೆಯಲ್ಲಿ ಕೆಲಸ ಮಾಡಲು ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಮಡಿಕೇರಿ, ಟೌನ್ ಹಾಲ್ ಹಿಂಭಾಗದಲ್ಲಿ ಪೆನ್‍ಸನ್ ಲೈನ್ ಪೊಲೀಸ್ ವಸತಿ ಗೃಹದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಹಿರಿಯ ನಾಗರಿಕರಿಗೆ ಕೇಂದ್ರದಲ್ಲಿ ದೊರೆಯುವ ಸೌಲಭ್ಯವನ್ನು ವಿವರಿಸಿದರು. ಹಿರಿಯರು ಉಚಿತ ದೂರವಾಣಿ ಕರೆ 1090 ಇದರ ಬಳಕೆ ಮಾಡಲು ತಿಳಿಸಿದರು. ದಿನದ ಇಪ್ಪತ್ತ್ನಾಲ್ಕು ಗಂಟೆಯು ಉಚಿತ ಕರೆಗೆ ಹಿರಿಯರು ಫೋನ್ ಮಾಡಬಹುದು. ತತ್‍ಕ್ಷಣವೇ ಕೇಂದ್ರದ ಸಿಬ್ಬಂದಿಯವರು ನಿಮ್ಮ ಸಹಾಯಕ್ಕೆ ನಿಲ್ಲುವರು ಎಂಬುದನ್ನು ತಿಳಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯರು ಜನಪ್ರತಿನಿಧಿಗಳು ಅಧಿಕಾರಿ ವರ್ಗದವರು ಸಂಸ್ಥೆಯವರು ಭಾಗವಹಿಸಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: