ಸುದ್ದಿ ಸಂಕ್ಷಿಪ್ತ

ದೇವರಾಜ ಮಾರುಕಟ್ಟೆ: ಮೇಯರ್ ಭೈರಪ್ಪ ಹೇಳಿಕೆಗೆ ಖಂಡನೆ

ದೇವರಾಜ ಮಾರುಕಟ್ಟೆ ಪಾರಂಪರಿಕ ಕಟ್ಟಡವಲ್ಲವೆಂಬ ಮೇಯರ್ ಭೈರಪ್ಪನವರ ಹೇಳಿಕೆಯನ್ನು ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘದ ಅಧ್ಯಕ್ಷರಾದ ಪೈ.ಎಸ್. ಮಹದೇವು ಖಂಡಿಸಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಅಧ್ಯಕ್ಷರು, ಇದು 18ನೇ ಐಟಂನಲ್ಲೇ ಸೇರ್ಪಡೆಗೊಂಡು ಪಾರಂಪರಿಕ ಕಟ್ಟಡವೆಂದು ಮಾನ್ಯತೆ ಪಡೆದಿದೆ. ಆದರೂ ಮಾಹಿತಿ ಇಲ್ಲದೆ ಮೇಯರ್ ಈ ರೀತಿಯ ಹೇಳಿಕೆ ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ದೇವರಾಜ್ ಒಡೆಯರ್ ಅವರ ನೆನಪಿಗಾಗಿ ನಾಲ್ವಡಿ ಕೃಷ್ಣರಾಜ್ ಒಡೆಯರ್ ಅವರು ಈ ಮಾರುಕಟ್ಟೆಯನ್ನ ನಿರ್ಮಾಣ ಮಾಡಿದವರು. ಮೇಯರ್ ಭೈರಪ್ಪನವರು ಬಾಲಿಶ ಹೇಳಿಕೆ ನೀಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವಂತದಲ್ಲ. ದೇವರಾಜ ಮಾರುಕಟ್ಟೆ ಕಟ್ಟಡ ಕೆಡವಲು ಸಂಚು ನಡೆಯುತ್ತಿದ್ದು, ದುರಸ್ತಿ ನೆಪದಲ್ಲಿ ಕಟ್ಟಡ ಕೆಡವಿದ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

Leave a Reply

comments

Related Articles

error: