ದೇಶಪ್ರಮುಖ ಸುದ್ದಿ

2022ರೊಳಗೆ ಭಯೋತ್ಪಾದನೆ ನಿರ್ಮೂಲನೆ : ರಾಜನಾಥ್ ಸಿಂಗ್

ದೇಶ(ನವದೆಹಲಿ)ಆ.19:- 2022ರೊಳಗೆ ಭಯೋತ್ಪಾದನೆ, ನಕ್ಸಲ್ ವಾದ, ಎಡಪಂಥಗಳ ಉಗ್ರವಾದ ನಿರ್ಮೂಲನೆಯಾಗಲಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಗೃಹಸಚಿವ ರಾಜನಾಥ್ ಸಿಂಗ್ ಮಾತನಾಡಿ 2022ರೊಳಗೆ ಕಾಶ್ಮೀರದಲ್ಲಿನ ತೊಂದರೆಗಳ ಜೊತೆ ಭಯೋತ್ಪಾದನೆ, ನಕ್ಸಲ್ ಸಮಸ್ಯೆ ಹಾಗೂ ಎಡಪಂಥೀಯ ಉಗ್ರವಾದಕ್ಕೆ ಹಂತಹಂತವಾಗಿ ಮುಕ್ತಿ ಸಿಗಲಿದೆ ಎಂದರು. ನವಭಾರತ ಚಳುವಳಿ 2017-2022ರ ನವಭಾರತ ನಿರ್ಮಾಣದಲ್ಲಿ ಭಾರತವನ್ನು ಸ್ವಚ್ಛ, ಬಡತನ ಮುಕ್ತ, ಭ್ರಷ್ಟಾಚಾರ ಮುಕ್ತ, ಭಯೋತ್ಪಾದನೆ ಮುಕ್ತ, ಜಾತೀವಾದ ಮುಕ್ತ ಮಾಡಬೇಕೆನ್ನುವ ಪ್ರತಿಜ್ಞೆ ಮಾಡಿಸಿದರು. ಮಹಾತ್ಮಾಗಾಂಧಿಯವರು ಸ್ವಚ್ಛತೆಯ ಮಹತ್ವವವನ್ನು ಗುರುತಿಸಿ ಇದನ್ನು ಅಭಿಯಾನವಾಗಿ ಪರಿವರ್ತಿಸಿದರು. ಬಿಜೆಪಿ ‘ಸರ್ಕಾರ’ ರಚಿಸಲು ರಾಜಕೀಯ ಮಾಡುವುದಿಲ್ಲ. ಬದಲಾಗಿ ರಾಷ್ಟ್ರ ನಿರ್ಮಾಣ ಮತ್ತು ಅಭಿವೃದ್ಧಿಯ ರಾಜಕೀಯ ನಡೆಸುತ್ತದೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: