ಮೈಸೂರು

ದಸರಾ ಬಾಕಿ ವೆಚ್ಚಗಳನ್ನು ಬಿಡುಗಡೆ ಮಾಡುವ ಕಾರ್ಯನಿರ್ವಹಣೆಗೆ ಮುಖ್ಯ ಲೆಕ್ಕಾಧಿಕಾರಿ ನೇಮಕಗೊಳಿಸಿದ ಡಿ.ರಂದೀಪ್

ಮೈಸೂರು,ಆ.19:- ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2017ರ ಕುರಿತು ಉಪಸಮಿತಿಗಳಿಗೆ ಬಿಡುಗಡೆ ಮಾಡುವ ಅನುದಾನ ಮತ್ತು 2016ನೇ ಸಾಲಿನ ದಸರಾದ ಬಾಕಿ ವೆಚ್ಚಗಳನ್ನು ಬಿಡುಗಡೆ ಮಾಡುವ ಕಾರ್ಯನಿರ್ವಹಣೆಗೆ ಮುಖ್ಯ ಲೆಕ್ಕಾಧಿಕಾರಿಗಳನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ನೇಮಿಸಿದ್ದಾರೆ.

ದಸರಾ ಮಹೋತ್ಸವ-2017ರ ಅಂಗವಾಗಿ ದಸರಾ ಕಾರ್ಯಕ್ರಮವನ್ನು ಆಯೋಜಿಸಲು 16 ಉಪಸಮಿತಿಗಳನ್ನು ನೇಮಿಸಲಾಗಿದೆ. ಉಪಸಮಿತಿಗಳಿಗೆ ಇತರ ಕೆಲಸ ಕಾರ್ಯಗಳಿಗೆ ಮುಖ್ಯ ಸಮಿತಿಯಿಂದ ಅನುದಾನ ಬಿಡುಗಡೆ ಮಾಡುವ ಕುರಿತು ಚರ್ಚಿಸಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲೆಕ್ಕಾಧಿಕಾರಿಗಳ ಹುದ್ದೆ ಇಲ್ಲದಿರುವುದರಿಂದ ದಸರಾ ಕಾರ್ಯಕ್ಕೆ ತಾತ್ಕಾಲಿಕವಾಗಿ ಜಿಲ್ಲಾ ಪಂಚಾಯತ್ ನ ಮುಖ್ಯ ಲೆಕ್ಕಾಧಿಕಾರಿಗಳನ್ನು ದಸರಾ ಕಾರ್ಯ ಮುಗಿಯುವವವರೆಗೆ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ನಿಯೋಜಿಸಲಾಗಿದೆ. ಮುಖ್ಯ ಲೆಕ್ಕಾಧಿಕಾರಿಗಳು 2016ನೇ ಸಾಲಿನ ದಸರಾ ಸಂಬಂಧ ಬಾಕಿ ಇರುವ ಬಿಲ್ಲುಗಳನ್ನು ಪರಿಶೀಲಿಸಿ ಪಾವತಿಸುವ ಕುರಿತು ಅಪರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಸೂಚಿಸಲಾಗಿದೆ. 2017ನೇ ಸಾಲಿನ ದಸರಾಗೆ ಉಪಸಮಿತಿಗಳಿಗೆ ಬಿಡುಗಡೆ ಮಾಡುವ ಅನುದಾನ ಬಜೆಟ್ ಗಳ ಕುರಿತು ಪ್ರಸ್ತಾವನೆಗಳನ್ನು ಪರಿಶೀಲಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದು ಕ್ರಮ ಕೈಗೊಳ್ಳುವ ಕುರಿತು ಸೂಚಿಸಲಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: