ಸುದ್ದಿ ಸಂಕ್ಷಿಪ್ತ

“ರಂಗ ವಿಮರ್ಶೆ ಅಂದು–ಇಂದು” ವಿಚಾರ ಸಂಕಿರಣ

ರಾಜೇಶ್ವರಿ ವಸ್ತ್ರಾಲಂಕಾರ ರಂಗ ತಂಡ – ಮೈಸೂರು ಇವರ ಸಹಯೋಗದಲ್ಲಿ “ರಂಗ ವಿಮರ್ಶೆ ಅಂದು–ಇಂದು” ಕುರಿತಾದ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮವನ್ನ ಅ.23 ರ ಬೆಳಗ್ಗೆ 10.30 ಕ್ಕೆ ಮೈಸೂರಿನ ರಂಗಾಯಣದ ಶ್ರೀರಂಗದಲ್ಲಿ ಆಯೋಜಿಸಲಾಗಿದೆ. ಹಿರಿಯ ರಂಗಕರ್ಮಿ ಡಾ. ನ. ರತ್ನ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಹಿರಿಯ ರಂಗಕರ್ಮಿಯಾದ ಡಾ. ಹೆಚ್.ಕೆ. ರಾಮನಾಥ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಹಿಸಲಿದ್ದಾರೆ. ಇದರೊಂದಿಗೆ ರಂಗವಿಮರ್ಶೆ ಬೆಳೆದುಬಂದ ದಾರಿ ಎಂಬ ವಿಷಯದ ಬಗ್ಗೆ ಪ್ರೊ. ಎಚ್. ಉಮೇಶ್ ಅವರು ವಿಷಯ ಮಂಡಿಸಲಿದ್ದು, ಶ್ರೀಕಂಠ ಗುಂಡಪ್ಪ ಅವರು ನಾಟಕವನ್ನು ನೋಡುವ ಬಗೆ ಹೇಗೆ ಎಂಬುದನ್ನು ತಿಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದರು, ಚಿಂತಕರು, ನಾಟಕಾಸಕ್ತರು ಭಾಗಿಯಾಗಲಿದ್ದು, ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಮನವಿ ಮಾಡಿದ್ದಾರೆ.

Leave a Reply

comments

Related Articles

error: