ಸುದ್ದಿ ಸಂಕ್ಷಿಪ್ತ

ಅ. 23: ನಿರ್ಮಲಾನಂದನಾಥ ಮಹಾಸ್ವಾಮೀಜಿ ಹೆಸರಿನ ನಾಮಫಲಕದ ಉದ್ಘಾಟನೆ

ವಿಶ್ವಮಾನವ ಒಕ್ಕಲಿಗರ ಕೇಮಾಭಿವೃದ್ದಿ ಸಂಘದ ವತಿಯಿಂದ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರ ಹೆಸರಿನ ನಾಮಫಲಕದ ಉದ್ಘಾಟನಾ ಸಮಾರಂಭವನ್ನು ಮೈಸೂರಿನ ಜೆ.ಪಿ. ನಗರದ ಎ ಬ್ಲಾಕ್ ನಲ್ಲಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಪಾದಂಗಳರ ಉದ್ಯಾನವನ ಬಳಿ ಅ. 23ರ ಬೆಳಗ್ಗೆ 10 ಗಂಟೆಗೆ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನ ಮೇಯರ್ ಬಿ.ಎಲ್. ಭೈರಪ್ಪನವರು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನ ಒಕ್ಕಲಿಗರ ಸಂಘದ ಅಧ್ಯಕ್ಷರಾದ ಮೇ. ಸು. ನಿಂಗೇಗೌಡ ವಹಿಸಲಿದ್ದಾರೆ. ವಿಶೇಷ ಆಹ್ವಾನಿತರಾಗಿ ರೈಲ್ವೆ ಇಲಾಖೆಯ ಹಿರಿಯ ಅಭಿಯಂತರರಾದ ಎಂ.ಬಿ. ಮಂಜೇಗೌಡ, ವಕೀಲರಾದ ಬಿ. ಕಾಳೇಗೌಡ, ಸಮಾಜಸೇವಕರಾದ ಕೆ.ಎಂ. ಕೃಷ್ಣೇಗೌಡ ಹಾಗೂ ಎಚ್.ಸಿ. ದೇವರಾಜೇಗೌಡ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

Leave a Reply

comments

Related Articles

error: