ಮೈಸೂರು

ಗೌರಿಗಣೇಶ -ಬಕ್ರೀದ್ ಪ್ರಯುಕ್ತ ಪೊಲೀಸರಿಂದ ಪಥ ಸಂಚಲನ

ಮೈಸೂರು,19:- ಗೌರಿ ಗಣೇಶ ಹಾಗೂ ಬಕ್ರಿದ್ ಹಬ್ಬದ ಹಿನ್ನೆಲೆಯಲ್ಲಿ ಜನರಲ್ಲಿ ಯಾವುದೇ ಅಧೈರ್ಯ ಉಂಟಾಗಬಾರದೆಂಬ ಸದುದ್ದೇಶದಿಂದ ನಗರ ಪೂಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಲ್ಲಿ ಪೋಲಿಸರ ಬಗ್ಗೆ ಒಲವು ಮೂಡಿಸುವ ಸಲುವಾಗಿ ಹಾಗೂ ದುಷ್ಕೃತ್ಯ ಎಸಗುವವರ ಎದೆಯಲ್ಲಿ ನಡುಕ ತರುವ ಉದ್ದೇಶದಿಂದ ಹುಣಸೂರು ನಗರದ ಪ್ರಮುಖ ರಸ್ತೆಗಳಲ್ಲಿ ಶನಿವಾರ ಬೆಳ್ಳಗೆ ಪೋಲಿಸರು ಪಥ ಸಂಚಲನ ಮಾಡಿದರು.
ನಗರ ಠಾಣೆ ಸಬ್ ಇನ್ಸಪೆಕ್ಟರ್ ಷಣ್ಮುಗಂ ನೇತೃತ್ವದಲ್ಲಿ  ನಡೆದ ಪಥ ಸಂಚಲನ ನಗರದ ಪ್ರಮುಖ ಬೀದಿಗಳಾದ ಜೆ.ಎಲ್.ಬಿ ರಸ್ತೆ, ಐ.ಕೆ ಕಲ್ಯಾಣ ಮಂಟಪ ರಸ್ತೆ, ಬಜಾರ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. (ಎಸ್.ಎಚ್)

Leave a Reply

comments

Related Articles

error: