ಮನರಂಜನೆ

ಗಾಯಕ ಶಾಸ್ತ್ರಿಗೆ ನೆರವಾಗಲಿದ್ದಾರೆ ನವರಸ ನಾಯಕ ಜಗ್ಗೇಶ್

ಬೆಂಗಳೂರು,ಆ.19-ಸ್ಯಾಂಡಲ್ ವುಡ್ ಕಂಡ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಲ್ಲಿ ಒಬ್ಬರಾದ ಎಲ್.ಎನ್.ಶಾಸ್ತ್ರಿ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಇವರಿಗೆ ಆರ್ಥಿಕವಾಗಿ ಸಹಾಯ ಮಾಡಲು ನವರಸ ನಾಯಕ ಜಗ್ಗೇಶ್ ಮುಂದಾಗಿದ್ದಾರೆ.
1996 ರಲ್ಲಿ ಅಜಗಜಾಂತರ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಎಲ್.ಎನ್.ಶಾಸ್ತ್ರಿ ಸುಮಾರು 3000 ಕ್ಕೂ ಗೀತೆಗಳಿಗೆ ಧ್ವನಿಯಾಗಿದ್ದಾರೆ. ಜಗ್ಗೇಶ್ ಅವರ ಅನೇಕ ಸಿನಿಮಾಗಳಲ್ಲಿ ಶಾಸ್ತ್ರಿ ಕೆಲಸ ಮಾಡಿದ್ದಾರೆ. ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಶಾಸ್ತ್ರಿ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಇವರಿಗೆ ನೆರವಾಗಲು ಜಗ್ಗೇಶ್ ನಿರ್ಧರಿಸಿದ್ದಾರೆ.

ಈ ಕುರಿತು ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿರುವ ಜಗ್ಗೇಶ್‌, `ನನಗೆ ಹಾಡಿದ ಮಹನೀಯ, ನಾನು ಸಹಾಯ ಮಾಡುವೆ. ಸಂಬಂಧಪಟ್ಟವರಿಗೆ ಈಗಲೇ ಮಾತಾಡುವೆ. ದೇವರೆ ತುಂಬ ದುಖ್ಖವಾಯಿತು. ದೇವರಂತ ಮನುಷ್ಯನಿಗೆ ಈ ಪರೀಕ್ಷೆ ಏಕೆ? ರಾಯರ ದಯೇ ಇರಲಿ ಇವರ ಮೇಲೆ’, ಭಂಡ ನನ್ನ ಗಂಡ ಚಿತ್ರಕ್ಕೆ ರಾತ್ರಿಯಲ್ಲಾ ನನ್ನ ಜೊತೆ ಕೂತು `ಅಂತಿಂಥ ಗಂಡು ನಾನಲ್ಲಾ’ ಹಾಡಲು ಸಹಾಯಮಾಡಿ ನನ್ನ ಅನೇಕ ಚಿತ್ರಕ್ಕೆ ಈತನೆ ಹಾಡುತಿದ್ದ! ಬಹಳ ಭಾವನಾಜೀವಿ ಎಂದಿದ್ದಾರೆ. (ವರದಿ-ಎಂ.ಎನ್)

 

Leave a Reply

comments

Related Articles

error: