ಮೈಸೂರು

ಇಬ್ಬರು ಸರಗಳ್ಳರ ಬಂಧನ

ಮೈಸೂರು, ಆ.19:-ಮೈಸೂರು ನಗರ ಸಿಸಿಬಿ ಪೊಲೀಸರು ನಗರದ ವಿವಿಧೆಡೆಗಳಲ್ಲಿ ಸರ ಅಪಹರಿಸುತ್ತಿದ್ದ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಬೆಂಗಳೂರು ವಿಜಯನಗರ ನಿವಾಸಿ ಪೈಸಲ್ ಅಹ್ಮದ್,  ಮೈಸೂರು ಶಾಂತಿನಗರ ನಿವಾಸಿ ಮಹ್ಮದ್ ತೌಸಿಫ್ ಎಂದು ಗುರುತಿಸಲಾಗಿದೆ. ಆರೋಪಿಗಳು ವಿವಿಪುರಂ ಠಾಣಾ ವ್ಯಾಪ್ತಿಯಲ್ಲಿ ಪ್ರಾಬಿಜನ್ ಸ್ಟೋರ್ ಗೆ ತೆರಳಿ ಬಾದಾಮಿ ಖರೀದಿಸುವಂತೆ ನಟಿಸಿ ಮಹಿಳೆಯ ಕತ್ತಿನಲ್ಲಿದ್ದ ಸರ ಅಪಹರಿಸಿದ್ದರು. ಸರಸ್ವತಿಪುರಂ 10ನೇ ಮೇನ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯಿಂದ ಸ್ಕೂಟರ್ ನಲ್ಲಿ ಬಂದು ಸರ ಕಿತ್ತುಕೊಂಡು ಹೋಗಿದ್ದೇವೆ ಎಂದು ವಿಚಾರಣೆಯ ವೇಳೆ ತಿಳಿಸಿದ್ದಾರೆ. ಇವರು ಮಂಡಿಮೊಹಲ್ಲಾ ಎರಡನೇ ಈದ್ಗಾ ಮೇನ್ ರಸ್ತೆಯಲ್ಲಿರುವ ಕೇಕ್ ಪಾಯಿಂಟ್ ಬೇಕರಿ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ನಂಬರ್ ಪ್ಲೇಟ್ ಇಲ್ಲದ ಸುಜುಕಿ ಆಕ್ಸೆಸ್ ಸ್ಕೂಟರ್ ನಲ್ಲಿ ಅನುಮಾನಾಸ್ಪದವಾಗಿ ಬರುತ್ತಿರುವಾಗ ವಶಕ್ಕೆ ಪಡೆದಿದ್ದರು. ಬಂಧಿತರಿಂದ ಒಂದು ಲಕ್ಷರೂ.ಮೌಲ್ಯದ ಎರಡು ಚಿನ್ನದ ಸರಗಳನ್ನು ವಶಕ್ಕೆ ಪಡೆದಿದ್ದಾರೆ. ಪತ್ತೆ ಕಾರ್ಯಾಚರಣೆಯು ಅಪರಾಧ ವಿಭಾಗದ ಡಿಸಿಪಿ ಡಾ.ವಿಕ್ರಮ್ ಆಮ್ಟೆ ಮಾರ್ಗದರ್ಶನದಲ್ಲಿ, ಸಿಸಿಬಿ ಎಸಿಪಿ ಸಿ.ಗೋಪಾಲ್ ನೇತೃತ್ವದಲ್ಲಿ, ಪೊಲೀಸ್ ಇನ್ಸಪೆಕ್ಟರ್ ಆರ್.ಜಗದೀಶ್, ಪಿಎಸ್.ಐ ಎಂ.ಜೆ.ಜಯಶೀಲನ್, ಎಎಸ್ ಐ ಕೆ.ವಿಜಯ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: