ಮೈಸೂರು

ಗೋಕುಲಂನ ತೂಗು ಕೈತೋಟ ಗಿನ್ನಿಸ್ ದಾಖಲೆಗೆ ನೋಂದಾಣಿ : ರೆವರೆಂಡ್ ಬೆಂಜಮಿನ್ ವಾಸ್

ಮೈಸೂರು, ಆ.19 : ಸಾವಿರಾರು ವಿಶೇಷ ಸಸ್ಯರಾಶಿ ಹಾಗೂ ಸುಮಾರು ನೂರಕ್ಕೂ ಹೆಚ್ಚು ಪಕ್ಷಿಗಳಿಗೆ ಆವಾಸ ಸ್ಥಾನವಾಗಿರುವ ನಗರದ ಗೋಕುಲಂನ ನಿವಾಸಿ ರೆವರೆಂಡ್ ಬೆಂಜಮಿನ್ ವಾಸ್ ಅವರ ಮನೆ ಈಗ ಗಿನ್ನಿಸ್ ದಾಖಲೆಗೆ ಸೇರ್ಪಡೆಯಾಗುವ ಸನ್ನಿಹಿತದಲ್ಲಿದೇ.

ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಸ್ಯ ಪ್ರೇಮಿ ರೆವರೆಂಡ್ ಬೆಂಜಮಿನ್ ವಾಸ್ ಅವರು ವಿವರ ನೀಡಿ ತಮ್ಮ ಎರಡಂತಸ್ತಿನ ಮನೆಯ ಒಳಗೂ ಹಾಗೂ ಹೊರಗೂ ಇಂಚಿಂಚಿನಲ್ಲೂ ವಿಶೇಷ ಔಷಧಿ ಸಸ್ಯಗಳು ಸೇರಿದಂತೆ ಸುಮಾರು 8 ಸಾವಿರ ಐನೂರಕ್ಕೂ ಹೆಚ್ಚು ವಿವಿಧ ಬಗೆಯ ಸಸ್ಯಗಳನ್ನು ಬೆಳೆಸಲಾಗಿದ್ದು ಮೈಸೂರಿಗರು ಸೇರಿದಂತೆ ರಾಜ್ಯ, ದೇಶ,ವಿದೇಶಿ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದು, ಈಗಾಗಲೇ ನಮ್ಮ ತೂಗು ಉದ್ಯಾನವನವೂ ದೇಶ ವಿದೇಶಿಗರ ಆಕರ್ಷಿಣೀಯ ತಾಣವಾಗಿದೆ ಎಂದು ತಿಳಿಸಿದರು.

ವಿವಿಧ ಜಾತಿ ಪಕ್ಷಿಗಳಿಗೂ ನಮ್ಮ ಮನೆ ಆವಾಸ ಸ್ಥಾನವಾಗಿದೆ. ಗಿಡಗಳಿಗೆ ಜೈವಿಕ ಪಳೆಯುಳಿಕೆ ಗೊಬ್ಬರ ಮತ್ತು ಸಾವಯುವ ಗೊಬ್ಬರವನ್ನು ಮಾತ್ರ ಬಳಕೆ ಮಾಡಲಾಗುತ್ತಿದ್ದು ಅತ್ಯಂತ ಸಮೃದ್ಧಿಯಿಂದ ಬೆಳೆಯುತ್ತಿವೆ, ವಿಶೇಷತೆಗಳಿಂದ ಕೂಡಿರುವ ನಮ್ಮ ಮನೆಯನ್ನು ಗಿನ್ನಿಸ್ ದಾಖಲೆಗೆ ಸೇರಿಸಲು ಅರ್ಜಿಯನ್ನು ನೋಂದಾಯಿಸಲಾಗಿದೆ. ಮುಂದಿನ ದಿನಗಳಲ್ಲಿ ಗಿನ್ನಿಸ್ ಸಂಸ್ಥೆಯ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲಿಸಲಿದ್ದಾರೆಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ತೋಟಗಾರಿಕೆ ಇಲಾಖೆ ಸಿಬ್ಬಂದಿ ಸೋಮಣ್ಣ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: