ಮೈಸೂರು

ಮರಿಗೌಡ ನ್ಯಾಯಾಂಗ ಬಂಧನ ಸೆಪ್ಟಂಬರ್ 1ರ ವರೆಗೆ ವಿಸ್ತರಣೆ

ಮೈಸೂರು ಮಾಜಿ ಜಿಲ್ಲಾಧಿಕಾರಿ ಸಿ ಶಿಖಾ ಅವರಿಗೆ ಧಮಕಿ ಹಾಕಿದರೆನ್ನಲಾದ ಪ್ರಕರಣದ ಆರೋಪಿ ಕೆ. ಮರಿಗೌಡ ಅವರ ನ್ಯಾಯಾಂಗ ಬಂಧನವನ್ನು ಸೆಪ್ಟಂಬರ್ 1ರ ವರೆಗೆ ವಿಸ್ತರಿಸಲಾಗಿದೆ.

ನ್ಯಾಯಾಲಯದ ಈ ಹಿಂದಿನ ಆದೇಶದಂತೆ ನ್ಯಾಯಾಂಗ ಬಂಧನ ಅವಧಿ ಶುಕ್ರವಾರವೇ ಕೊನೆಗೊಂಡಿತ್ತು. ಹೀಗಾಗಿ ಪೊಲೀಸರು ಮರಿಗೌಡ ಅವರನ್ನು ಶನಿವಾರ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಮೂರ್ತಿ ದೀಪಾ ಅವರು ವಿಸ್ತರಣೆ ಆದೇಶ ಹೊರಡಿಸಿದರು.

ಕಳೆದ ಜುಲೈ 3 ರಂದು ಅಂದಿನ ಜಿಲ್ಲಾಧಿಕಾರಿ ಸಿ. ಶಿಖಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರೆನ್ನಾದ ಪ್ರಕರಣದ ಸಂಬಂಧ ಮರಿಗೌಡ ಮತ್ತು ಆತನ ಸಹಚರನೆನ್ನಲಾದ ಮಂಜುನಾಥ ಸೇರಿದಂತೆ ಒಟ್ಟು ಐದು ಮಂದಿಯ ಮೇಲೆ ಐಪಿಸಿ ಸೆಕ್ಷನ್ 143, 147, 353, 504ರ ಅಡಿ ಪ್ರಕರಣ ದಾಖಲಾಗಿತ್ತು. ಒಂದು ತಿಂಗಳ ಕಾಲ ತಲೆಮರೆಸಿಕೊಂಡಿದ್ದ ಇವರು ನಂತರ ಮೈಸೂರಿನ ನಜ಼ರ್‍^ಬಾದ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು.

Leave a Reply

comments

Related Articles

error: