ಮೈಸೂರು

ಚಿಗುರು ಭಿತ್ತಿ ಪತ್ರಿಕೆ ವಿದ್ಯಾರ್ಥಿನಿಯರಲ್ಲಿ ಅಡಗಿರುವ ಸುಪ್ತ ಪ್ರತಿಭೆ ಹೊರಹೊಮ್ಮಿಸಲು ಸೂಕ್ತ ವೇದಿಕೆ : ಡಾ. ಎಂ. ಶಾರದ

ಮೈಸೂರು,ಆ.19:- ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ವತಿಯಿಂದ ವಿದ್ಯಾರ್ಥಿನಿಯರಿಂದ ರಚಿತವಾದ ಚಿಗುರು ಭಿತ್ತಿ ಪತ್ರಿಕೆಯ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಪತ್ರಿಕೆಯನ್ನು ಉದ್ಘಾಟಿಸಿ ಮಾತನಾಡಿದ  ಕಾಲೇಜಿನ ಪ್ರಾಂಶುಪಾಲೆ ಡಾ. ಎಂ. ಶಾರದ, ಚಿಗುರು ಭಿತ್ತಿ ಪತ್ರಿಕೆಯು ವಿದ್ಯಾರ್ಥಿನಿಯರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಲು ಸೂಕ್ತವಾದ ವೇದಿಕೆಯಾಗಿದ್ದು, ಕಾಲೇಜಿನ ಎಲ್ಲ ವಿಭಾಗದ ವಿದ್ಯಾರ್ಥಿನಿಯರು ಈ ವೇದಿಕೆಯನ್ನು ಸದುಪಯೋಗಪಡಿಸಿಕೊಂಡು ತಮ್ಮ ಸ್ವರಚಿತ ಲೇಖನ, ಕಥೆ, ಕವನ, ಚಿತ್ರಗಳನ್ನು ಆಯಾಯ ಪೂರಕ ವಿಷಯಕ್ಕೆ ಸಂಬಂಧಪಟ್ಟಂತೆ ಬರೆಯುವ ಮೂಲಕ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಬಹುದು. ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿನಿಯರು ಈ ಪತ್ರಿಕೆಯಲ್ಲಿ ಕ್ರಿಯಾಶೀಲರಾಗಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದ ತಿಳಿಸಿದರು.

ಕನ್ನಡ ವಿಭಾಗ ಮುಖ್ಯಸ್ಥ ಜಿ. ಪ್ರಸಾದಮೂರ್ತಿ, ಸಹಾಯಕ ಪ್ರಾಧ್ಯಾಪಕರುಗಳಾದ ಕೆ.ಎನ್. ರಾಣಿ, ಎಂ.ಎಸ್. ಸಂಧ್ಯಾರಾಣಿ, ಹೆಚ್.ಬಿ. ಬಸಪ್ಪ ಮತ್ತಿತರರು ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: