ಕ್ರೀಡೆಮೈಸೂರು

ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು : ಡಾ. ಕೃಷ್ಣಯ್ಯ ಪಿ, ಚಾಲನೆ

ಮೈಸೂರು,ಆ.19:- ಮೈಸೂರು ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಟೆರಿಷಿಯನ್ ಪದವಿ ಪೂರ್ವಕಾಲೇಜಿನ ಸಂಯುಕ್ತ ಆಶ್ರಯದಲ್ಲಿ  2017-18 ನೇ ಸಾಲಿನ ಬಾಲಕಿಯರ ತಾಲೂಕು ಮಟ್ಟದ ವಾಲಿಬಾಲ್, ಕಬಡ್ಡಿ, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಮತ್ತು ಖೋ-ಖೋ ಪಂದ್ಯಾವಳಿಗಳು ತಂಡಗಳ ಪರಿಚಯದೊಂದಿಗೆ ಪ್ರಾರಂಭವಾಯಿತು,

ಥ್ರೋಬಾಲ್‍ ಎಸೆಯುವುದರ ಮೂಲಕ ಮೈಸೂರು ವಿಶ್ವವಿದ್ಯಾನಿಲಯ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಕೃಷ್ಣಯ್ಯ ಪಿ, ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಪಠ್ಯದ ಜೊತೆಗೆ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ವಿದ್ಯಾರ್ಥಿನಿಯರು ಹೆಚ್ಚಾಗಿ ಆಟೋಟಗಳಲ್ಲಿ ಭಾಗವಹಿಸಿ ತಮ್ಮಆರೋಗ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ತಿಳಿಸಿದರು., ಪದವಿ ಪೂರ್ವ ಶಿಕ್ಷಣ ಇಲಾಖೆಯ  ಉಪನಿರ್ದೇಶಕಿ ಶ್ಯಾಮಲ ವಿ.ಆರ್,  ಮಾತನಾಡಿ ವಿದ್ಯಾರ್ಥಿಗಳು ತಾಳ್ಮೆ, ಸಹನೆ ಏಕಾಗ್ರತೆಯನ್ನು ಬೆಳೆಸಿಕೊಂಡು ಉತ್ತಮವಾದ ಅವಕಾಶಗಳನ್ನು ಉಪಯೋಗಿಸಿಕೊಂಡು ಉತ್ತಮ  ಪ್ರಜೆಯಾಗಿ ಬೆಳೆಯಬೇಕು ಹಾಗೂ ಕ್ರೀಡೆಯಲ್ಲಿ ಸೋಲು ಗೆಲುವಿನಲ್ಲಿ ಸಮ ಬಲವನ್ನು ಕಾಣಬೇಕು ಎಂದು ಕಿವಿ ಮಾತು ಹೇಳಿದರು. ಈ ಸಂದರ್ಭ  ಸೇಂಟ್‍ತೇರೆಸಾ ವಿದ್ಯಾ ಸಂಸ್ಥೆ ನಿರ್ದೇಶಕಿ ರೆವರೆಂಡ್‍  ಡಾ.ಸಿಸ್ಟರ್ ಸಜೀತಾ, ಪ್ರಾಂಶುಪಾಲೆ ರೆವರೆಂಡ್ ಸಿಸ್ಟರ್. ಪ್ರಪೂಲ್ಲಾ, ಎಸ್.ಬಿ.ಆರ್.ಆರ್ ಮಹಾಜನ ಪಿ.ಯುಕಾಲೇಜಿನ ದೈಹಿಕ ಶಿಕ್ಷಣ ಉಪಾನ್ಯಾಸಕ ಕೆ.ಎಂ.ಕಾಂತರಾಜ್, , ವಿದ್ಯಾವರ್ಧಕ ಪಿ.ಯುಕಾಲೇಜು ದೈಹಿಕ ಶಿಕ್ಷಣ ಉಪಾನ್ಯಾಸಕ ಆನಂದ್, ದೈಹಿಕ ಶಿಕ್ಷಣ ನಿರ್ದೇಶಕ ಅಂತೋಣಿ ಮೋಸೆಸ್ ಮತ್ತಿತರರು ಉಪಸ್ಥಿತರಿದ್ದರು.  700 ವಿದ್ಯಾರ್ಥಿನಿಯರು ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: