ಸುದ್ದಿ ಸಂಕ್ಷಿಪ್ತ

ಭೂ ರಹಿತರು, ವಸತಿ ವಂಚಿತರ ಸಮಸ್ಯೆ ಪರಿಹಾರಕ್ಕಾಗಿ ಆ.21 ರಿಂದ ಧರಣಿ

ಮೈಸೂರು,ಆ.19-ಭೂ ರಹಿತರು ಮತ್ತು ವಸತಿ ವಂಚಿತರ ಸಮಸ್ಯೆಯನ್ನು ಪರಿಹರಿಸುವ ಕುರಿತು ಆ.21 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ, ಬುಡಕಟ್ಟು ಕೃಷಿಕರ ಸಂಘ ಹಾಗೂ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ, ಆದಿವಾಸಿ ಗಿರಿಜನ ಅಭಿವೃದ್ಧಿ ಸಂಘ ಮತ್ತು ಜೀವಿಕಾ ಸಂಘಟನೆಯ ಸಂಯುಕ್ತಾಶ್ರಯದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ. ಹೊನ ಚಳವಳಿಯ ನೇತೃತ್ವವನ್ನು ವಹಿಸಿದಂತಹ ಜಿನ್ನೇಶ್ ನಿವಾನಿ ಅವರ ನೇತೃತ್ವದಲ್ಲಿ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ಎಲ್ಲ ಜಿಲ್ಲಾ ಕಚೇರಿಗಳ ಮುಂದೆ ಮತ್ತು ಫ್ರೀಡಂ ಪಾರ್ಕ್ ನಲ್ಲಿ ಏಕಕಾಲಕ್ಕೆ ಧರಣಿ ನಡೆಯಲಿದೆ. (ವರದಿ-ಎಂ.ಎನ್)

Leave a Reply

comments

Related Articles

error: