ಸುದ್ದಿ ಸಂಕ್ಷಿಪ್ತ

ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ

ಮೈಸೂರು, ಆ.19: ಜ್ಞಾನದೀಪ್ತಿ ಟ್ರಸ್ಟ್ ವತಿಯಿಂದ ಐಬಿಪಿಎಸ್-ಆರ್ ಆರ್ ಬಿ , ಪಿ.ಓ ಹಾಗೂ ಬ್ಯಾಂಕಿಂಗ್ ಪರೀಕ್ಷೆಗೆ 2 ತಿಂಗಳ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿ ಅವಧಿಯಲ್ಲಿ ಮಾನಸಿಕ ಸಾಮರ್ಥ್ಯ, ತಾರ್ಕಿಕ ಗಣಿತ, ಪ್ರಚಲಿತ ಜ್ಞಾನ ಹಾಗೂ ಇಂಗ್ಲೀಷ್ ವಿಷಯಗಳನ್ನು ಬೋಧಿಸಲಾಗುತ್ತದೆ. ಆಸಕ್ತರು ಆ.22 ರೊಳಗೆ ನಂ. 10/2, ಎಂ.ಎನ್ ಜೋಯಿಸ್ ರಸ್ತೆ (ಮರಿಮಲ್ಲಪ್ಪ ಕಾಲೇಜು ಮುಂಭಾಗದ ರಸ್ತೆಯ ಮುಂಭಾಗ) ಇಲ್ಲಿ ಸಂಜೆ 4 ರಿಂದ 8 ಗಂಟೆಯೊಳಗೆ ಹೆಸರು ನೋಂದಾಯಿಸಿಕೊಳ್ಳಲು ಸಂಸ್ಥೆಯ ಸಂಯೋಜಕ ಪ್ರೊ.ಸಾಯಿಶಂಕರ್ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9844099674/ 7406074639 ಗೆ ಸಂಪರ್ಕಿಸಬಹುದಾಗಿದೆ. (ಎಲ್.ಜಿ)

Leave a Reply

comments

Related Articles

error: