ಮನರಂಜನೆ

ನಟಿ ಸಂಜನಾ ಗೆ ‘ಪ್ರಸಿದ್ಧಿ ಚಿಟ್ ಫಂಡ್​​’ ನಿಂದ 26 ಲಕ್ಷ ಪಂಗನಾಮ

ಬೆಂಗಳೂರು,ಆ.19: ಸ್ಯಾಂಡಲ್ ವುಡ್ ನಟಿ ಸಂಜನಾಗೆ ‘ಪ್ರಸಿದ್ಧಿ ಚಿಟ್ ಫಂಡ್​​’ ನಿಂದ 26 ಲಕ್ಷ ಪಂಗನಾಮ ಹಾಕಿರುವ ಘಟನೆ ನಡೆದಿದೆ.

ಈ ಕುರಿತಾಗಿ ನಟಿ ಸಂಜನಾ ಖುದ್ದಾಗಿ ಹೇಳಿಕೊಂಡಿದ್ದಾರೆ.  ಚಿಟ್​ ಕಂಪನಿ ‘ಪ್ರಸಿದ್ಧಿ ಚಿಟ್ ಫಂಡ್​​’ 26 ಲಕ್ಷ ಮೋಸ ಮಾಡಿದೆ. ನಟಿ ಸಂಜನಾ ಸೇರಿದಂತೆ 150 ಜನರಿಗೆ ಒಟ್ಟು 16 ಕೋಟಿ ಪಂಗನಾಮ ಹಾಕಿರುವುದೂ ಇದೇ ವೇಳೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧಿ ಚಿಟ್ ಫಂಡ್’ನ ಮಾಲೀಕರಾದ ಮಹೇಶ್, ಪತ್ನಿ ನಿರುಪಮಾ ವಿರುದ್ಧ ನಟಿ ಸಂಜನಾ ಈಗಾಗಲೇ ದೂರು ನೀಡಿದ್ದಾರೆ.

ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ವರದಿ: ಎಲ್.ಜಿ)

Leave a Reply

comments

Related Articles

error: