ಮೈಸೂರು

ಆ.27 ರಂದು ಶಾಲಾ ಮಕ್ಕಳಿಗಾಗಿ ಓಟದ ಸ್ಪರ್ಧೆ

ಮೈಸೂರು,ಆ.19 : ಪ್ಯಾಲೇಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆ.27ರ ಬೆಳಗ್ಗೆ 6.30 ರಿಂದ ಶಾಲಾ ಮಕ್ಕಳಿಗಾಗಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯು ರಾಮಕೃಷ್ಣನಗರದ ಆಂದೋಲನ ವೃತ್ತದಿಂದ ಆರಂಭವಾಗುವುದು. ಪ್ರಾಥಮಿಕ ಶಾಲಾ ಮಕ್ಕಳಿಗೆ 2 ಕಿಮಿ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ 4 ಕಿ.ಮೀ ಓಟದ ಸ್ಪರ್ಧೆಯು ನಡೆಯುವುದು. ಉಚಿತ ಪ್ರವೇಶವಿದೆ.

ಪ್ರತಿ ವಿಭಾಗದಲ್ಲಿ 3 ಪ್ರಶಸ್ತಿ ಹಾಗೂ 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು. ಮಕ್ಕಳು ಕಡ್ಡಾಯವಾಗಿ ಗುರುತಿನ ಚೀಟಿಯೊಂದಿಗೆ ಆ.22ರೊಳಗೆ ನೋಂದಾಣಿ ಮಾಡಿಕೊಳ್ಳಬೇಕು. ಭಾಗವಹಿಸಿದವರಿಗೆ ಟೀಶರ್ಟ್ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ. 9164997757, 9844600460, 98456304979, 9448306311 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: