ಪ್ರಮುಖ ಸುದ್ದಿ

ವನ್ಯಜೀವಿಗಳ ಬೇಟೆಗೆ ಹೊಂಚುಹಾಕಿದ್ದ ಮೂವರ ಬಂಧನ

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಆ.೧೯: ಅರಣ್ಯ ಪ್ರದೇಶದ ಕಾಡಂಚಿನಲ್ಲಿ ವನ್ಯಜೀವಿಗಳ ಬೇಟೆಗೆ ಹೊಂಚುಹಾಕುತ್ತಿದ್ದ ಮೂವರು ಬೇಟೆಗಾರರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಬಂಡೀಪುರ ಹುಲಿ ಯೋಜನೆಯ ಓಂಕಾರ್ ವಲಯದ ಕಾಡಂಚಿನ ಆಲತ್ತೂರು ಗ್ರಾಮದ ಕಾಡಂಚಿನ ಜಮೀನಿನ ಬಳಿ ಬಲೆಗಳು, ಮಚ್ಚುಗಳು, ಗರಗಸ, ೨ ಬಂಡಲ್ ತಂತಿ, ಮಜಲಿಂಗ್ ಗನ್‌ಗೆ ಬಳಸುವ ಸಿಡಿಮದ್ದು ಮುಂತಾದ ಸಾಮಗ್ರಿಗಳೊಡನೆ ಕಾದು ಕುಳಿತಿದ್ದಾಗ ಅರಣ್ಯ ಗಸ್ತು ಸಿಬ್ಬಂದಿ ದಾಳಿ ನಡೆಸಿ ತಾಲೂಕಿನ ಭೀಮನಬೀಡು ಗ್ರಾಮದ ಗೋಪಾಲಶೆಟ್ಟಿ(೩೬), ಗೋಕುಲ್ ಶೆಟ್ಟಿ(೪೦) ಸಿದ್ದಶೆಟ್ಟಿ(೩೦) ಎಂಬ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

 

 

 

Leave a Reply

comments

Related Articles

error: