ಮೈಸೂರು

ಸೆ.21 ರಂದು ಆರಮನೆ ಆವರಣದಲ್ಲಿ ಟೆಂಟ್ ಶಾಲೆ ಉದ್ಘಾಟನೆ

ಮೈಸೂರು.ಆ.20 : ನಾಡಹಬ್ಬ  ಮೈಸೂರು ದಸರಾ- 2017 ರ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಮಾವುತರ ಮತ್ತು ಕಾವಾಡಿಗರ ಮಕ್ಕಳ ಟೆಂಟ್ ಶಾಲೆ ಮತ್ತು ಟೆಂಟ್ ಗ್ರಂಥಾಲಯದ ಉದ್ಘಾಟನಾ ಸಮಾರಂಭ ಆಗಸ್ಟ್ 21  ರಂದು ಸಂಜೆ 5 ಗಂಟೆಗೆ ಅರಮನೆ ಆವರಣದಲ್ಲಿ ನಡೆಯಲಿದೆ.
ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಹೆಚ್.ಸಿ. ಮಹದೇವಪ್ಪ ಅವರು ಟೆಂಟ್ ಶಾಲೆ ಉದ್ಘಾಟಿಸುವರು,   ಪ್ರಾಥಮಿಕ ಹಾಗೂ ಫ್ರೌಢಶಿಕ್ಷಣ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಸಚಿವ ತನ್ವೀರ್ ಸೇಠ್ ಅವರು ಟೆಂಟ್ ಗ್ರಂಥಾಲಯ ಉದ್ಘಾಟಿಸುವರು. (K.M.R)

Leave a Reply

comments

Related Articles

error: