
ಮೈಸೂರು
ದಸರಾ ಆನೆಗಳ ತಾಲೀಮಿಗೆ ಭದ್ರತೆ ಬೇಕು
ಮೈಸೂರು,ಆ.20:- ಮೈಸೂರು ದಸರಾ ಆನೆಗಳ ತಾಲೀಮಿಗೆ ಭದ್ರತೆ ಬೇಕು ಎಂಬ ಮಾತು ಕೇಳಿ ಬರುತ್ತಿದೆ.
ಆನೆ ತಾಲೀಮಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ. ಗಜಪಡೆ ಜೊತೆ ಕೇವಲ ಮಾವುತರು ಮಾತ್ರ ಹೆಜ್ಜೆ ಹಾಕುತ್ತಿದ್ದಾರೆ.ಮಾರ್ಗದಲ್ಲಿ ಆನೆಗಳಿಂದ ಉಂಟಾಗಬಹುದಾದ ತೊಂದರೆ ತಡೆಯಲು ಯಾವುದೇ ಭದ್ರತೆ ಇಲ್ಲವಾಗಿದೆ.ಆನೆಗಳ ಮುಂದೆ ಕೇವಲ ಒಂದು ಜೀಪ್ ಮಾತ್ರ ಚಲಿಸುತ್ತಿದೆ. ಭದ್ರತಾ ಸಿಬ್ಬಂದಿಗಳು ಕಾಣಿಸುತ್ತಿಲ್ಲ. ಆನೆಗಳಿಗೆ ತೊಂದರೆಯಾದರೆ ಗಮನಿಸಲು ವೈದ್ಯರು ಕೂಡ ಇಲ್ಲ. ಹಾಗಾದರೆ ಯಾವ ಪುರುಷಾರ್ಥಕ್ಕೆ ಆನೆಗಳಿಗೆ ಕೋಟಿ ವಿಮೆ ಮಾಡಿಸಬೇಕಿತ್ತು. ಜಿಲ್ಲಾಡಳಿತ ವಿಮೆ ಮಾಡಿಸಿ ಜವಾಬ್ದಾರಿ ಕಳೆದುಕೊಂಡಿದೆಯೇ, ಅಧಿಕಾರಿಗಳ ಕಾಟಾಚಾರದ ತಾಲೀಮಿನಿಂದ ನಾಗರಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ. (ಆರ್.ವಿ.ಎಸ್.ಎಚ್)